ಸುಮಲತಾ ಯಾವ ಪಕ್ಷದಿಂದ ನಿಂತರೂ ಪ್ರಚಾರ ಮಾಡ್ತಾರೆ ದರ್ಶನ್

|

Updated on: Feb 26, 2024 | 8:48 AM

ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ. ಅವರ ಪರ ದರ್ಶನ್ ಪ್ರಚಾರ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸುಮಲತಾ ಉತ್ತರ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದರ್ಶನ್ (Darshan) ಅವರು ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದರು. ಸುಮಲತಾ ಗೆಲುವು ಕಾಣಲು ದರ್ಶನ್ ಕೂಡ ಪ್ರಮುಖ ಕಾರಣ. ಈಗ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ. ಅವರ ಪರ ದರ್ಶನ್ ಪ್ರಚಾರ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸುಮಲತಾ ಉತ್ತರ ನೀಡಿದ್ದಾರೆ. ‘ಯಾವುದೇ ಪಕ್ಷದಲ್ಲಿ ನಿಂತರೂ ಪ್ರಚಾರ ಮಾಡುವುದಾಗಿ ದರ್ಶನ್ ಹೇಳಿದ್ದಾರೆ. ಯಶ್ ಜೊತೆ ನಾನಿನ್ನೂ ಮಾತನಾಡಿಲ್ಲ’ ಎಂದಿದ್ದಾರೆ ಸುಮಲತಾ. ಈ ಮೂಲಕ ದರ್ಶನ್ ಪ್ರಚಾರ ಮಾಡೋದು ಪಕ್ಕಾ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Feb 26, 2024 08:47 AM