ಚೈತ್ರಾ ಕುಂದಾಪುರ ಆಡಿಯೋದಲ್ಲಿ ಸುನೀಲ್ ಕುಮಾರ್ ಹೆಸರು; ಅವರ್ಯಾರು ನಂಗೆ ಗೊತ್ತಿಲ್ಲ ಎಂದ ಮಾಜಿ ಸಚಿವ, ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 16, 2023 | 7:57 PM

ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೀಲ್ ಮಾತುಕತೆಯಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್​ ಹೆಸರು ಪ್ರಸ್ತಾಪ ವಿಚಾರ ‘ನಾನು ಯಾರ ಜೊತೆಗೆ ಫೋನ್‌ನಲ್ಲೂ ಮಾತಾಡಿಲ್ಲ. ಅವರ ಮುಖ ಪರಿಚಯವು ನನಗೆ ಇಲ್ಲ ಎಂದು ಸುನೀಲ್​ ಹೇಳಿದರು.

ಉಡುಪಿ, ಸೆ.16: ಚೈತ್ರಾ ಕುಂದಾಪುರ ಗ್ಯಾಂಗ್​ನಿಂದ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೀಲ್ ಮಾತುಕತೆಯಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್​ (Sunil Kumar)ಹೆಸರು ಪ್ರಸ್ತಾಪ ವಿಚಾರ ‘ನಾನು ಯಾರ ಜೊತೆಗೆ ಫೋನ್‌ನಲ್ಲೂ ಮಾತಾಡಿಲ್ಲ. ಅವರ ಮುಖ ಪರಿಚಯವು ನನಗೆ ಇಲ್ಲ ಎಂದು ಹೇಳಿದರು. ಉಡುಪಿ ನಗರದಲ್ಲಿ ಮಾತನಾಡಿದ ಅವರು ‘ ಆಕಸ್ಮಿಕವಾಗಿ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲೂ ಅವರನ್ನು ಭೇಟಿಯಾಗಿಲ್ಲ. ನನಗೆ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದ ಪ್ರಕರಣವಿದು. ಪ್ರಕರಣ ಸಂಬಂಧ ಯಾವುದೇ ರೀತಿಯ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on