ಮೌಢ್ಯ ಮತ್ತು ಮೂಢನಂಬಿಕೆಗಳ ಆಚರಣೆಯಿಂದ ಕೂಡಲಸಂಗಮದಲ್ಲಿ ನೀರು ಕಲುಷಿತ, ಬಸವಣ್ಣ ನೀಡಿದ ಕರೆಗೆ ಅಪಚಾರ

ಅರುಣ್​ ಕುಮಾರ್​ ಬೆಳ್ಳಿ

Updated on: Apr 11, 2025 | 12:54 PM

ಬಟ್ಟೆ ಮಾತ್ರ ಅಲ್ಲ, ಮದುಮಕ್ಕಳು ಮದುವೆಯಲ್ಲಿ ಧರಿಸುವ ಬಾಸಿಂಗ ಮತ್ತು ಹೂವಿನಹಾರಗಳನ್ನು ಸಹ ತೀರದಲ್ಲಿ ಬಿಸಾಡುವುದರಿದ ಸಂಗಮದ ನೀರು ಕಲುಷಿತಗೊಳ್ಳುತ್ತಿದೆ. ಮೌಢ್ಯಗಳು, ಮೂಢನಂಬಿಕೆಗಳ ಆಚರಣೆ ಬೇಡ ಎಂದು ಬಸವಣ್ಣನರು 12 ನೇ ಶತಮಾನದಲ್ಲಿ ಹೇಳಿದ್ದರೂ ಅವುಗಳ ಆಚರಣೆ ಈಗ ಕೂಡ ಜಾರಿಯಲ್ಲಿದೆಯೆಂದರೆ ಆಗಿನ ಜನ ಬಸವನ್ಣನವರನ್ನು ಎಷ್ಟರಮಟ್ಟಿಗೆ ವಿರೋಧಿಸಿರಬಹುದು ಅನ್ನೋದನ್ನು ಅರ್ಥೈಸಿಕೊಳ್ಳಬಹುದು.

ಬಾಗಲಕೋಟೆ, ಏಪ್ರಿಲ್ 11: ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿರುವ ಕೂಡಲಸಂಗಮ (Kudalasangama) ಜಗಜ್ಯೋತಿ ಬಸವಣ್ಣನವರು ಐಕ್ಯರಾದ ಸ್ಥಳ, ಹಾಗಾಗೇ ಇಲ್ಲಿ ಐಕ್ಯಮಠವಿದೆ. ಇಲ್ಲಿ ಕಾಣುತ್ತಿರುವ ಜಾಗದಲ್ಲಿ ಕೃಷ್ಣೆ, ಮಲಪ್ರಭಾ ಮತ್ತು ಘಟಪ್ರಭಾ ನದಿಗಳ ತ್ರಿವೇಣಿ ಸಂಗಮವಾಗುವುದರಿಂದ ಇದಕ್ಕೆ ಕೂಡಲಸಂಗಮ ಅಂತ ಹೆಸರು ಬಂದಿದೆ. ಆದರೆ, ಕೆಲವು ಜನರ ಮೌಢ್ಯಾಚಾರಣೆಗಳಿಂದಾಗಿ ಸಂಗಮದ ನೀರು ಕಲುಷಿತಗೊಳ್ಳುತ್ತಿದೆ ಮತ್ತು ತಮ್ಮ ಬದುಕಿನಿಡೀ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಬಸವಣ್ಣನವರ ಹೆಸರಿಗೆ ಅಪಪ್ರಚಾರವಾಗುತ್ತಿದೆ ಎಂದು ನಮ್ಮ ಬಾಗಲಕೋಟೆ ವರದಿಗಾರ ಹೇಳುತ್ತಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆಂದು ಬರುವ ಜನ ನೀರಲ್ಲಿ ಮುಳುಗೆದ್ದು ಉಟ್ಟಬಟ್ಟೆಯನ್ನ ನದಿತೀರದಲ್ಲಿ ಬಿಸಾಡಿ ಹೋಗುತ್ತಾರೆ. ಬಟ್ಟೆಯೊಂದಿಗೆ ತಮ್ಮ ಅದುವರೆಗಿನ ಪಾಪಗಳು ಸಹ ಕಳಚಿಹೋಗುತ್ತವೆ ಎಂಬ ಮೂಢನಂಬಿಕೆ ಜನರಲ್ಲಿರುವುದರಿಂದ ಹಾಗೆ ಮಾಡುತ್ತಾರಂತೆ.

ಇದನ್ನೂ ಓದಿ:   ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ: ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಚನಾನಂದ ಸ್ವಾಮೀಜಿ ಮೆಚ್ಚುಗೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.