ಕೊಹ್ಲಿಗೆ ನೀಡಲು 15 ಲಕ್ಷ ರೂ. ಮೌಲ್ಯದ ಉಡುಗೊರೆ ತಂದ ಅಭಿಮಾನಿ; ವಿಡಿಯೋ

Updated on: Jan 14, 2026 | 7:37 PM

Virat Kohli: ನ್ಯೂಜಿಲೆಂಡ್ ವಿರುದ್ಧ ಸಚಿನ್ ಅವರ ಏಕದಿನ ದಾಖಲೆ ಮುರಿದ ವಿರಾಟ್ ಕೊಹ್ಲಿ, ಆಟದ ಹೊರಗೆ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸೂರತ್ ಅಭಿಮಾನಿಯೊಬ್ಬರು ಕೊಹ್ಲಿಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಐಫೋನ್ ಬ್ಯಾಕ್ ಕೇಸ್ ಉಡುಗೊರೆಯಾಗಿ ತಂದಿದ್ದು, ಇದು ವೈರಲ್ ಆಗಿದೆ. ಕೊಹ್ಲಿ ಫೋಟೋ ಕೆತ್ತಿದ ಈ ವಿಶೇಷ ಗಿಫ್ಟ್ ಬಗ್ಗೆ ಕುತೂಹಲ ಮೂಡಿಸಿದೆ. ಕೊಹ್ಲಿ ಇದನ್ನು ಸ್ವೀಕರಿಸುತ್ತಾರಾ ಎಂಬ ಪ್ರಶ್ನೆ ಕಾಡಿದೆ.

ನ್ಯೂಜಿಲೆಂಡ್ ವಿರುದ್ಧದ ರಾಜ್‌ಕೋಟ್‌ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸದೆ ಇರಬಹುದು. ಆದರೆ ತಮ್ಮ ಅಲ್ಪ ಇನ್ನಿಂಗ್ಸ್ ಮೂಲಕ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಕಿವೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಇದು ಪಂದ್ಯದ ವಿಚಾರವಾದರೆ, ಪಂದ್ಯದ ಹೊರಗಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿಗೆ ನೀಡಲು ಅತಿ ದುಬಾರಿ ಉಡುಗೊರೆಯೊಂದನ್ನು ತಂದಿದ್ದಾನೆ.

ವಾಸ್ತವವಾಗಿ ಸೂರತ್ ಮೂಲಕ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಲೆಂದು ಚಿನ್ನದಿಂದ ಮಾಡಿರುವ ಐಫೋನ್​ ಬ್ಯಾಕ ಕೇಸ್​ ಅನ್ನು ತಂದಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದ ಮುಂದೆ ಆ ಬ್ಯಾಕ್​ ಕೇಸ್​ ಅನ್ನು ಕ್ಯಾಮೆರಾಗಳಿಗೆ ಪ್ರದರ್ಶಿಸಿ ಇದನ್ನು ಕೊಹ್ಲಿಗೆ ನೀಡಲು ತಂದಿರುವುದಾಗಿಯೂ ಇದರ ಬಲೆ 1.5 ಮಿಲಿಯನ್ ಅಂದರೆ 15 ಲಕ್ಷ ರೂಪಾಯಿಗಳು ಎಂಬುದನ್ನು ಬಹಿರಂಗಪಡಿಸಿದ್ದಾನೆ.

ಈ ಬ್ಯಾಕ್ ಕೇಸ್​ನ ಇನ್ನೊಂದು ವಿಶೇಷತೆ ಏನೆಂದರೆ, ಇದರಲ್ಲಿ ವಿರಾಟ್ ಕೊಹ್ಲಿ ಅವರ ಫೋಟೋ ಮತ್ತು ಅವರ ಹೆಸರನ್ನು ಕೆತ್ತಲಾಗಿದೆ. ಇದೀಗ ಈ ಚಿನ್ನದ ಬ್ಯಾಕ್​ ಕೇಸ್​ನ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಕೊಹ್ಲಿ ಈ ಉಡುಗೊರೆಯನ್ನು ಸ್ವೀಕರಿಸುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ