ಸೂರತ್: ಮ್ಯಾನ್ಹೋಲ್ಗೆ ಬಿದ್ದ ಎರಡು ವರ್ಷದ ಬಾಲಕ
ಎರಡು ವರ್ಷದ ಬಾಲಕ ಮ್ಯಾನ್ಹೋಲ್ಗೆ ಬಿದ್ದಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಮಗುವನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೂರತ್ನ ವೈರವ್ ಗ್ರಾಮದಲ್ಲಿ ಮ್ಯಾನ್‌ಹೋಲ್‌ನ ಮುಚ್ಚುಳವು ಭಾರೀ ವಾಹನದಿಂದ ಹಾನಿಗೊಳಗಾಗಿತ್ತು, ಹೀಗಾಗಿ ಆ ಮಗು ಬಿದ್ದಿದೆ ಎನ್ನಲಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎರಡು ವರ್ಷದ ಬಾಲಕ ಮ್ಯಾನ್ಹೋಲ್ಗೆ ಬಿದ್ದಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ. ಮಗುವನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸೂರತ್ನ ವೈರವ್ ಗ್ರಾಮದಲ್ಲಿ ಮ್ಯಾನ್‌ಹೋಲ್‌ನ ಮುಚ್ಚುಳವು ಭಾರೀ ವಾಹನದಿಂದ ಹಾನಿಗೊಳಗಾಗಿತ್ತು, ಹೀಗಾಗಿ ಆ ಮಗು ಬಿದ್ದಿದೆ ಎನ್ನಲಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾರೀ ವಾಹನವೊಂದು ಮ್ಯಾನ್ಹೋಲ್ ಮುಚ್ಚುಳಕ್ಕೆ ಹಾನಿ ಮಾಡಿತ್ತು. 100-150 ಮೀಟರ್ ಪ್ರದೇಶದ ಸುತ್ತಲೂ ಪರಿಶೀಲಿಸಿದ್ದೇವೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪಾರಿಖ್ ತಿಳಿಸಿದ್ದಾರೆ.
ಮಗುವನ್ನು ರಕ್ಷಿಸಲು ಸಮಯ ತೆಗೆದುಕೊಳ್ಳುತ್ತದೆ, 60-70 ಕಾರ್ಮಿಕರನ್ನು ಇಲ್ಲಿ ನಿಯೋಜಿಸಲಾಗಿದೆ. ಮ್ಯಾನ್‌ಹೋಲ್‌ನ ಮುಚ್ಚಳ ತೆರೆದಿರುವುದು ನನಗೆ ತಿಳಿದಿರಲಿಲ್ಲ ಎಂದು ಬಾಲಕನ ತಾಯಿ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us