SMAT 2025: ಕೇವಲ 31 ಎಸೆತಗಳಲ್ಲಿ ಶತಕ ಬಾರಿಸಿದ ಉರ್ವಿಲ್ ಪಟೇಲ್; ವಿಡಿಯೋ
SMAT 2025: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ದಿನದಂದು ಗುಜರಾತ್ ನಾಯಕ ಉರ್ವಿಲ್ ಪಟೇಲ್ ಸರ್ವೀಸಸ್ ವಿರುದ್ಧ ಕೇವಲ 31 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಅವರ 119 ರನ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳಿದ್ದವು. ಇದು ಟ್ರೋಫಿಯಲ್ಲಿ ಎರಡನೇ ಅತಿ ವೇಗದ ಶತಕವಾಗಿದ್ದು, ಗುಜರಾತ್ ತಂಡಕ್ಕೆ ಏಕಪಕ್ಷೀಯ ಗೆಲುವು ತಂದುಕೊಟ್ಟಿದೆ. ಪಟೇಲ್ ಅವರ ಸ್ಫೋಟಕ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ದಿನದಂದು ಗುಜರಾತ್ ತಂಡದ ನಾಯಕ ಉರ್ವಿಲ್ ಪಟೇಲ್ ಕೇವಲ 31 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಹೈದರಾಬಾದ್‌ನ ಜಿಮ್ಖಾನಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸರ್ವೀಸಸ್ ತಂಡವು ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 182 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುಜರಾತ್ ಆರಂಭಿಕ ಆರ್ಯ ದೇಸಾಯಿ ಮತ್ತು ನಾಯಕ ಉರ್ವಿಲ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು 70 ಎಸೆತಗಳಲ್ಲಿ 174 ರನ್‌ಗಳನ್ನು ಸೇರಿಸುವ ಮೂಲಕ ಗುಜರಾತ್‌ಗೆ ಏಕಪಕ್ಷೀಯ ಗೆಲುವು ತಂದುಕೊಟ್ಟರು.
ಅದರಲ್ಲೂ ನಾಯಕ ಉರ್ವಿಲ್ ಪಟೇಲ್ ಕೇವಲ 37 ಎಸೆತಗಳಲ್ಲಿ ಅಜೇಯ 119 ರನ್ ಗಳಿಸುವ ಮೂಲಕ ಸರ್ವೀಸಸ್ ಬೌಲರ್‌ಗಳನ್ನು ಧ್ವಂಸ ಮಾಡಿದರು. ಅವರ ಇನ್ನಿಂಗ್ಸ್‌ನಲ್ಲಿ 10 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳು ಸೇರಿದ್ದವು ಮತ್ತು 321 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಇತ್ತು. ಇದು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರ ಎರಡನೇ ಅತಿ ವೇಗದ ಶತಕವಾಗಿದೆ, ಈ ಹಿಂದೆ 28 ಎಸೆತಗಳಲ್ಲಿ ಶತಕ ಗಳಿಸಿದ್ದರು.