‘ಟಗರು ಪಲ್ಯ’ ಸಿನಿಮಾ ಬಿಡುಗಡೆಗೆ ಮುನ್ನವೇ ನಟಿ ಅಮೃತಾಗೆ ಅವಕಾಶಗಳು ಬರುತ್ತಿವೆಯೇ?

Updated on: Oct 26, 2023 | 10:51 PM

Tagaru Palya: ನಾಗಭೂಷಣ್, ವಾಸುಕಿ ವೈಭವ್, ಪ್ರೇಮ್ ಪುತ್ರಿ ಅಮೃತಾ ನಟಿಸಿರುವ 'ಟಗರು ಪಲ್ಯ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಅಮೃತಾಗೆ ಹೊಸ ಸಿನಿಮಾ ಆಫರ್​ಗಳು ಬಂದಿವೆಯೇ?

ಡಾಲಿ ಧನಂಜಯ್ (Daali Dhananjay) ನಿರ್ಮಾಣ ಮಾಡಿ, ನಾಗಭೂಷಣ್, ವಾಸುಕಿ ವೈಭವ್, ಪ್ರೇಮ್ ಪುತ್ರಿ ಅಮೃತಾ ನಟಿಸಿರುವ ‘ಟಗರು ಪಲ್ಯ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಟ ಲವ್ಲಿ ಪ್ರೇಮ್ ಪುತ್ರಿ ಅಮೃತಾ ಈ ಸಿನಿಮಾ ಮೂಲಕ ನಟಿಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದಾರೆ. ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಹಾಡು, ಟ್ರೈಲರ್​ಗಳಲ್ಲಿಯೇ ಅಮೃತಾ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನವೇ ಅಮೃತಾಗೆ ಹೊಸ ಸಿನಿಮಾ ಅವಕಾಶಗಳು ಬರಲಾರಂಭಿಸಿವೆಯೇ? ಪ್ರಶ್ನೆಗೆ ಉತ್ತರ ನೀಡಿರುವ ಅಮೃತಾ, ಅದೇನೋ ಗೊತ್ತಿಲ್ಲ, ಸದ್ಯಕ್ಕೆ ನಾನು ಈ ಸಿನಿಮಾ ಬಗ್ಗೆ ಗಮನ ವಹಿಸಿದ್ದೀನಿ. ಹೊಸ ಅವಕಾಶಗಳು ಬಂದಿವೆಯೋ ಇಲ್ಲವೋ ಗೊತ್ತಿಲ್ಲ, ಅಪ್ಪ ನನ್ನ ಬಳಿ ಇನ್ನೂ ಏನೂ ಹೇಳಿಲ್ಲ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More