ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತಾಯಿತು; ತಾಲಿಬಾನ್ ಉಗ್ರರ ಅನಾಗರಿಕ ವರ್ತನೆ ನೋಡಿ

| Updated By: sandhya thejappa

Updated on: Aug 17, 2021 | 1:08 PM

ಇಡೀ ವಿಶ್ವದ ಕಣ್ಣು ಅಫ್ಘಾನಿಸ್ತಾನದ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುಬಹುದು ಎನ್ನುವ ಕಡೆ ಇದೆ. ಆದರೆ ತಾಲಿಬಾನಿಗಳು ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ ವರ್ತಿಸುತ್ತಿದ್ದಾರೆ.

ಸದ್ಯ ಅಫ್ಘಾನಿಸ್ತಾನದ ಪರಿಸ್ಥಿತಿ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತೆ. ತಾನಿಬಾನಿ ಉಗ್ರರ ಅಟ್ಟಹಾಸಕ್ಕೆ ಜೀವ ಉಳಿದರೆ ಸಾಕು ಅಂತ ಉಟ್ಟ ಬಟ್ಟೆಯಲ್ಲೇ ದೇಶ ಬಿಟ್ಟು ಓಡುತ್ತಿದ್ದಾರೆ. ನಿನ್ನೆ (ಆಗಸ್ಟ್ 16) ಅಫ್ಘಾನಿಸ್ತಾನದಿಂದ ಹೊರಟ ವಿಮಾನವೊಂದರಲ್ಲಿ ನೇತು ಬಿದ್ದಿದ್ದ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಜೀವವೊಂದಿದ್ದರೆ ಹೇಗೋ ಬದುಕಬಹುದು ಅಂತ ಅಲ್ಲಿದ್ದ ಜನ ಕಾಲ್ಕೀಳುತ್ತಿದ್ದಾರೆ. ಇಡೀ ವಿಶ್ವದ ಕಣ್ಣು ಅಫ್ಘಾನಿಸ್ತಾನದ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುಬಹುದು ಎನ್ನುವ ಕಡೆ ಇದೆ. ಆದರೆ ತಾಲಿಬಾನಿಗಳು ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕಂತೆ ವರ್ತಿಸುತ್ತಿದ್ದಾರೆ. ಒಂದು ಕಡೆ ಜೀವ ರಕ್ಷಣೆಗೆ ಜನ ಓಡುತ್ತಿದ್ದರೆ, ಇನ್ನೊಂದು ಕಡೆ ತಾಲಿಬಾನ್ ಉಗ್ರರು ಯಾವುದೇ ಚಿಂತೆಯಿಲ್ಲದೆ ಆಟವಾಡುತ್ತ ಕಾಲ ಕಳೆಯುತ್ತಿದ್ದಾರೆ. ಜಂಪಿಂಗ್​ ರಿಂಗ್​ನಲ್ಲಿ ಹುಚ್ಚಾಟ ಆಡುತ್ತಿರುವ ತಾಲಿಬಾನಿ ಉಗ್ರರು ಅನಾಗರಿಕ ವರ್ತನೆ ತೋರುತ್ತಿದ್ದಾರೆ. ಜಂಪಿಂಗ್​ ರಿಂಗ್ ಮೇಲೆ ಹಾರುತ್ತ, ಕುಣಿಯುತ್ತ ಜೊತೆಗೆ ಕೂಗುತ್ತಾ ಆಟವಾಡುತ್ತಿದ್ದಾರೆ. ಅಫ್ಘಾನ್​ರಾಜಧಾನಿ ಕಾಬುಲ್​ ತಮ್ಮ ವಶಕ್ಕೆ ಪಡೆದ ತಾಲಿಬಾನ್​ ಉಗ್ರರು ಫುಲ್ ಎಂಜಾಯ್​ ಮೂಡ್​ನಲ್ಲಿದ್ದಾರೆ. ಗುರಿ ಸಾಧಿಸಿದ್ದೇವೆ ಅಂತ ಚಿಕ್ಕ ಮಕ್ಕಳಂತೆ ಕುಣಿಯುತ್ತಿದ್ದಾರೆ.