Tamil Nadu Election Result: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ, ಕಾಂಗ್ರೆಸ್​​​ಗೆ ಬಿಗ್ ಆಫರ್

Updated on: May 04, 2026 | 3:30 PM

ತಮಿಳುನಾಡು  ರಾಜಕೀಯದಲ್ಲಿ (Tamilnadu Politics) ದಳಪತಿ ಸಂಚಲನ ಮೂಡಿಸಿದ್ದಾರೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದ ದಳಪತಿ ವಿಜಯ್ (Vijay) ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ (Election) ಭರ್ಜರಿ ಸಾಧನೆ ಮಾಡಿದೆ. ಇದರೊಂದಗೆ ತಮಿಳುನಾಡಿನಲ್ಲಿ ದಶಕಗಳಿಂದ ನಡೆಯುತ್ತಿರುವ ದ್ರಾವಿಡ ರಾಜಕೀಯದ ಲೆಕ್ಕಾಚಾರವನ್ನೇ ವಿಜಯ್ ಉಲ್ಟಾ ಮಾಡಿದ್ದಾರೆ. ಇನ್ನು ಟಿವಿಕೆ ಗಮನಾರ್ಹ ಸಾಧನೆ ಬಗ್ಗೆ ವಿಜಯ್ ತಂದೆ ಎಸ್​.ಎ.ಚಂದ್ರಶೇಖರ್ ಫುಲ್ ಖುಷ್ ಆಗಿದ್ದು, ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್​ಗೆ ಆಫರ್ ನೀಡಿದ್ದಾರೆ.

ಚೆನ್ನೈ, (ಮೇ 04): ತಮಿಳುನಾಡು  ರಾಜಕೀಯದಲ್ಲಿ (Tamilnadu Politics) ದಳಪತಿ ಸಂಚಲನ ಮೂಡಿಸಿದ್ದಾರೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದ ದಳಪತಿ ವಿಜಯ್ (Vijay) ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ (Election) ಭರ್ಜರಿ ಸಾಧನೆ ಮಾಡಿದೆ. ಇದರೊಂದಗೆ ತಮಿಳುನಾಡಿನಲ್ಲಿ ದಶಕಗಳಿಂದ ನಡೆಯುತ್ತಿರುವ ದ್ರಾವಿಡ ರಾಜಕೀಯದ ಲೆಕ್ಕಾಚಾರವನ್ನೇ ವಿಜಯ್ ಉಲ್ಟಾ ಮಾಡಿದ್ದಾರೆ. ಇನ್ನು ಟಿವಿಕೆ ಗಮನಾರ್ಹ ಸಾಧನೆ ಬಗ್ಗೆ ವಿಜಯ್ ತಂದೆ ಎಸ್​.ಎ.ಚಂದ್ರಶೇಖರ್ ಫುಲ್ ಖುಷ್ ಆಗಿದ್ದು, ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್​ಗೆ ಆಫರ್ ನೀಡಿದ್ದಾರೆ.

ಟಿವಿಕೆ ಗೆದ್ದಿರುವುದಕ್ಕೆ ಮಾಧ್ಯಮಗಳ ಜತೆ ಖುಷಿ ಹಂಚಿಕೊಂಡಿರುವ ವಿಜಯ್ ತಂದೆ ಎಸ್​.ಎ.ಚಂದ್ರಶೇಖರ್,ಟಿವಿಕೆಗೆ ಬಹುಮತ ಬಂದಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಳ್ಳಲು ಸಿದ್ಧ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು?

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More