ಮನೆಯ ದಿನಸಿಗಾಗಿ ಬೆಲೆಬಾಳುವ ಮೇಕಪ್ ಕಿಟ್ ತ್ಯಾಗ ಮಾಡಿದ ತನಿಷಾ ಕುಪ್ಪಂಡ
ದಿನಸಿ ಸಾಮಗ್ರಿ ನೀಡಲು ಬಿಗ್ ಬಾಸ್ ತನಿಷಾ ಅವರ ಮೇಕಪ್ ಕಿಟ್ನ ವಶಕ್ಕೆ ಪಡೆದಿದ್ದಾರೆ. ಹಾಗಂತ ತನಿಷಾ ಕುಪ್ಪಂಡ ಅವರು ಈ ತ್ಯಾಗಕ್ಕೆ ಮುಂದಾಗಿಲ್ಲ. ಮನೆಯವರು ಅವರ ಹೆಸರನ್ನು ಸೂಚಿಸಿದರು.
ತನಿಷಾ ಕುಪ್ಪಂಡ ಅವರಿಗೆ ಮೇಕಪ್ ಮೇಲೆ ಎಲ್ಲಿಲ್ಲದ ಪ್ರೀತಿ. ಅವರು ನಿತ್ಯವೂ ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ, ಇನ್ನುಮುಂದೆ ಅದು ಸಾಧ್ಯವಿಲ್ಲ! ದಿನಸಿ ಸಾಮಗ್ರಿ ನೀಡಲು ಬಿಗ್ ಬಾಸ್ ತನಿಷಾ ಅವರ ಮೇಕಪ್ ಕಿಟ್ನ ವಶಕ್ಕೆ ಪಡೆದಿದ್ದಾರೆ. ಹಾಗಂತ ತನಿಷಾ ಕುಪ್ಪಂಡ (Tanisha Kuppanda) ಅವರು ಈ ತ್ಯಾಗಕ್ಕೆ ಮುಂದಾಗಿಲ್ಲ. ಬಿಗ್ ಬಾಸ್ ಮನೆಯವರು ಸ್ಪರ್ಧಿಗಳಿಗೆ ಹೆಸರನ್ನು ಸೂಚಿಸಲು ಹೇಳಿದರು. ಈ ವೇಳೆ ಎಲ್ಲರೂ ತನಿಷಾ ಹೆಸರನ್ನು ತೆಗೆದುಕೊಂಡರು. ತನಿಷಾ ಅವರು ಕಣ್ಣೀರು ಹಾಕುತ್ತಾ ಬಿಗ್ ಬಾಸ್ ನಿರ್ಧಾರಕ್ಕೆ ತಲೆ ಬಾಗಿದರು. ಇಂದು (ಜನವರಿ 15) ಈ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ