ಭಾರತದ ಮೇಲಿನ ಭಯದಿಂದ ಭಾರತೀಯ ಸರಕುಗಳ ಮೇಲೆ ಸುಂಕ ಹೇರಿಕೆ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

Updated on: Sep 12, 2025 | 10:22 PM

ಬ್ರಹ್ಮ ಕುಮಾರೀಸ್ ವಿಶ್ವ ಸಮಿತಿ ಸರೋವರದ 7ನೇ ಸಂಸ್ಥಾಪನಾ ದಿನದಂದು ಮಾಡಿದ ಭಾಷಣದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಈ ಸುಂಕಗಳನ್ನು ಸ್ವಾರ್ಥಪರ ಮನಸ್ಥಿತಿಯ ಪರಿಣಾಮವಾಗಿ ವಿವರಿಸಿದರು. ದೇಶಗಳ ನಡುವೆ ಯಾವುದೇ ತಕ್ಷಣದ ಸಂಪರ್ಕವು ಸ್ಪಷ್ಟವಾಗಿಲ್ಲದಿದ್ದರೂ ಸಹ ಶತ್ರುಗಳನ್ನು ನಿರ್ಮೂಲನೆ ಮಾಡಲು ಸಹಾನುಭೂತಿ ತೋರಿಸುವುದು ಮತ್ತು ಭಯವನ್ನು ಜಯಿಸುವುದು ನಿರ್ಣಾಯಕವಾಗಿದೆ ಎಂದು ಅವರು ಪುನರುಚ್ಚರಿಸಿದರು.

ನಾಗ್ಪುರ, ಸೆಪ್ಟೆಂಬರ್ 12: ಬಲಿಷ್ಠ ಭಾರತದ ಭಯದಿಂದ ಭಾರತೀಯ ಸರಕುಗಳ ಮೇಲೆ ಸುಂಕಗಳನ್ನು ವಿಧಿಸಲಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಬ್ರಹ್ಮ ಕುಮಾರೀಸ್ ವಿಶ್ವ ಸಮಿತಿ ಸರೋವರದ 7ನೇ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಇಂದು ಮಾತನಾಡಿದ ಅವರು, ಭಾರತದ ಪ್ರಗತಿಯು ತಮ್ಮ ಜಾಗತಿಕ ಸ್ಥಾನಮಾನವನ್ನು ಕುಗ್ಗಿಸಬಹುದು ಎಂಬ ಭಯದಿಂದ ಅಮೆರಿಕದಂತಹ ರಾಷ್ಟ್ರಗಳು ಸುಂಕಗಳನ್ನು ವಿಧಿಸುತ್ತಿವೆ. ಜಗತ್ತಿನಲ್ಲಿ ಭಾರತ ಬೆಳೆದರೆ ಅದರಿಂದ ತಮ್ಮ ಸ್ಥಾನ ಕಡಿಮೆಯಾಗುತ್ತದೆ ಎಂದು ಜನರು ಭಯಪಡುತ್ತಿದ್ದಾರೆ. ಆದ್ದರಿಂದ ಅವರು ಸುಂಕಗಳನ್ನು ವಿಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ