VIDEO: ಸಿಕ್ಸ್ ಬಾರಿಸಿದರೂ ಬಾಂಗ್ಲಾ ಬ್ಯಾಟರ್ ಔಟ್..!

Updated on: Oct 28, 2025 | 9:25 AM

Bangladesh vs West Indies, 1st T20I: ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿ 165 ರನ್​ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 19.4 ಓವರ್​ಗಳಲ್ಲಿ 149 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ಪಂದ್ಯದಲ್ಲಿ 16 ರನ್​ಗಳ ಜಯ ಸಾಧಿಸಿದೆ. 

ಬಾಂಗ್ಲಾದೇಶ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 165 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 129 ರನ್​ಗೆ 9 ವಿಕೆಟ್ ಕಳೆದುಕೊಂಡಿತು.

ಈ ಹಂತದಲ್ಲಿ ಕಣಕ್ಕಿಳಿದ ತಸ್ಕಿನ್ ಅಹ್ಮದ್ 20ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ಸಿಕ್ಸ್ ಹೊರತಾಗಿಯೂ ತಸ್ಕಿನ್ ಪೆವಿಲಿಯನ್​ ಕಡೆ ಹೆಜ್ಜೆ ಹಾಕಬೇಕಾಯಿತು. ಅಂದರೆ ಬ್ಯಾಟ್ ಬೀಸುವಾಗ ತಸ್ಕಿನ್ ಅವರ ಕಾಲು ವಿಕೆಟ್​ಗೆ ತಗುಲಿದೆ. ಹೀಗಾಗಿ ಅಂಪೈರ್ ಹಿಟ್ ವಿಕೆಟ್ ಎಂದು ಘೋಷಿಸಿದ್ದಾರೆ.

ಇದೀಗ ಸಿಕ್ಸ್ ಸಿಡಿಸಿ ಹಿಟ್ ವಿಕೆಟ್ ಆಗಿ ಹೊರ ನಡೆದಿರುವ ತಸ್ಕಿನ್ ಅಹ್ಮದ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿ 165 ರನ್​ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 19.4 ಓವರ್​ಗಳಲ್ಲಿ 149 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ಪಂದ್ಯದಲ್ಲಿ 16 ರನ್​ಗಳ ಜಯ ಸಾಧಿಸಿದೆ.