Tata Tigor EV:ಭರ್ಜರಿ ಮೈಲೇಜ್ ನೀಡುವ 2022ರ ಟಾಟಾ ಟಿಗೋರ್ ಇವಿ ಬಿಡುಗಡೆ
ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ಕಂಪನಿಯು ಟಿಗೋರ್ ಇವಿ ಹೊಸ ಆವೃತ್ತಿ ಬಿಡುಗಡೆ ಮಾಡಿದೆ.
ಟಾಟಾ ಮೋಟಾರ್ಸ್ ಹೊಸ ಟಿಗೋರ್ ಇವಿ ಕಂಪ್ಯಾಕ್ಟ್ ಸೆಡಾನ್ ಲಾಂಗ್ ರೇಂಜ್ ಬ್ಯಾಟರಿ ಸೌಲಭ್ಯದೊಂದಿಗೆ ಹಲವಾರು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಎಕ್ಸ್ ಇ, ಎಕ್ಸ್ ಟಿ, ಎಕ್ಸ್ ಜೆಡ್ ಪ್ಲಸ್ ಮತ್ತು ಎಕ್ಸ್ ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್ ಹೊಂದಿದೆ. ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.75 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯಲ್ಲಿ ನೆಕ್ಸಾನ್ ಇವಿ ಕಾರಿನಿಂದಲೂ ಹಲವಾರು ಫೀಚರ್ಸ್ ಎರವಲು ಪಡೆಯಲಾಗಿದೆ. ಹೊಸ ಟಿಗೋರ್ ಇವಿ ಮಾದರಿಯು 26kWh ಲೀಥಿಯಂ ಅಯಾನ್ ಬ್ಯಾಟರಿ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 315 ಕಿ.ಮೀ ಮೈಲೇಜ್ ನೀಡುತ್ತದೆ.
Published on: Nov 23, 2022 07:32 PM