ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 24-ವರ್ಷದ ಗೃಹಿಣಿ ಸಾವು; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಕುಟುಂಬದ ಆರೋಪ
ಕೇವಲ 24-ವರ್ಷ-ವಯಸ್ಸಿನ ಕವಿತಾ ಹೆಸರಿನ ಗೃಹಿಣಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದ ಕಾರಣ ಸತ್ತಿದ್ದಾಳೆ ಎಂದು ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ.
ಬೆಂಗಳೂರು: ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ವೈದ್ಯರ ನಿರ್ಲಕ್ಷ್ಯದಿಂದ (medical negligence) ಬೆಂಗಳೂರಲ್ಲಿ ಇನ್ನೊಂದು ಸಾವು ಸಂಭವಿಸಿದೆ ಎಂದು ಅರೋಪಿಸಲಾಗಿದೆ. ಎರಡು ದಿನಗಳ ಹಿಂದೆ ದಣಿವು ಮತ್ತು ಕಡಿಮೆ ರಕ್ತದೊತ್ತಡದಿಂದಾಗಿ ನಗರದ ಆರ್ ಟಿ ನಗರದಲ್ಲಿರುವ ಚಿರಾಯು ಆಸ್ಪತ್ರೆಗೆ (Chirayu Hospital) ಸೇರಿದ್ದ ಕೇವಲ 24-ವರ್ಷ-ವಯಸ್ಸಿನ ಕವಿತಾ (Kavita) ಹೆಸರಿನ ಗೃಹಿಣಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದ ಕಾರಣ ಸತ್ತಿದ್ದಾಳೆ ಎಂದು ಮೃತಳ ಕುಟುಂಬದ ಸದಸ್ಯರು ಆರೋಪಿಸುತ್ತಿದ್ದಾರೆ. ಕವಿತಾಗೆ ಕೇವಲ 7 ತಿಂಗಳು ಹಿಂದಷ್ಟೇ ಮದುವೆಯಾಗಿತ್ತು. ಅವಳಿಗೆ ಯಾವ ಕಾಯಿಲೆ ಯಿದೆ ಅಂತ ಪತ್ತೆ ಮಾಡುವುದೇ ವೈದ್ಯರಿಗೆ ಗೊತ್ತಾಗಿಲ್ಲ ಎಂದು ಕವಿತಾಳ ಪತಿ ಆರೋಪಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos