ರಂಗಾಪುರದ ವೀರಭದ್ರೇಶ್ವರ ಮಠದಲ್ಲಿ ನಾಗರಹಾವು ಪ್ರತ್ಯಕ್ಷ; ಹಾವಿಗೆ ಹಾಲಿಟ್ಟು ಘೋಷಣೆ ಕೂಗಿದ ಜನ
ರಂಗಾಪುರದ ವೀರಭದ್ರೇಶ್ವರ ಮಠದಲ್ಲಿ ನಾಗರಹಾವು ಪ್ರತ್ಯಕ್ಷ. ಬೆಳ್ಳಂಬೆಳಗ್ಗೆ ನಾಗಪ್ಪನ ಕಂಡು ವಿಸ್ಮಿತರಾದ ಗ್ರಾಮಸ್ಥರು.
ರಾಯಚೂರು: ರಂಗಾಪುರದ ವೀರಭದ್ರೇಶ್ವರ ಮಠದಲ್ಲಿ ರಂಗಾಪುರ ನಾಗರಹಾವು ಪ್ರತ್ಯಕ್ಷವಾಗಿದೆ. ಮಠದಲ್ಲಿ ನಾಗರಹಾವು ಕಂಡು ಗ್ರಾಮಸ್ಥರು ವಿಸ್ಮಿತರಾಗಿದ್ದು ಜೈಕಾರ ಹಾಕಿದ್ದಾರೆ. ತಟ್ಟೆಯಲ್ಲಿ ಹಾಲು ಹಾಕಿ ಹಾವಿನ ಬಳಿ ಇಟ್ಟಿದ್ದಾರೆ. ಕೆಲ ಹೊತ್ತಿನ ಬಳಿಕ ವೀರಭದ್ರೇಶ್ವರ ಮಠದತ್ತ ಗ್ರಾಮಸ್ಥರ ದಂಡೇ ಹರಿದು ಬಂದಿದೆ. ಬಳಿಕ ಓರ್ವ ಉರಗ ತಜ್ಞನ್ನ ಕರೆಸಿ ಮಠದೊಳಗಿದ್ದ ಹಾವು ರಕ್ಷಣೆ ಮಾಡಲಾಗಿದೆ. ಈ ವೇಳೆ ಭಕ್ತರು ವೀರಭದ್ರೇಶ್ವರನಿಗೆ ಘೋಷಣೆ ಕೂಗಿದ್ದು ನಾಗರಹಾವನ್ನ ಕಾಡಿಗೆ ಬಿಡಲಾಗಿದೆ.
ಶೌಚಾಲಯದಲ್ಲಿ ಬುಸಗುಟ್ಟಿದ್ದ ನಾಗಪ್ಪ
ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯ ಶೌಚಾಲಯದಲ್ಲಿ ಹಾವು ಕಾಣಿಸಿಕೊಂಡಿದ್ದು ಕಂಪನಿ ಸಿಬ್ಬಂದಿ ಭಯಭೀತರಾದ ಘಟನೆ ನಡೆದಿದೆ. ಮೋಡ ಕವಿದ ವಾತಾವರಣ ಇರುವ ಕಾರಣ ಬೆಚ್ಚಿಗೆ ಇರುವ ಸ್ಥಳಗಳಲ್ಲಿ ಹಾವುಗಳು ಅಡಗಿಕೊಳ್ಳುತ್ತಿವೆ. ಸುಮಾರು ಐದು ಅಡಿ ಉದ್ದದ ನಾಗರಹಾವನ್ನು ಉರಗ ಸಂರಕ್ಷಕ ದಿಲೀಪ್ ರಕ್ಷಣೆ ಮಾಡಿದ್ದಾರೆ.
Latest Videos