Diganth Manchale: ದಿಗಂತ್ ಕಾಲಿಗೆ ಪೆಟ್ಟು; ಕುಂಟುತ್ತಲೇ ಬಂದು ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆದ ನಟ
Thimayya and Thimayya: ನಟ ದಿಗಂತ್ ಅವರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಡೆಯಲು ಕೂಡ ಅವರಿಗೆ ಕಷ್ಟ ಆಗುತ್ತಿದೆ. ಅದರ ನಡುವೆಯೂ ಅವರು ಸಿನಿಮಾ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ.
ದಿಗಂತ್ ಮತ್ತು ಅನಂತ್ ನಾಗ್ ನಟನೆಯ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’ (Thimayya and Thimayya) ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇಂದು (ನ.23) ನಡೆದಿದೆ. ಕೆಲವು ತಿಂಗಳ ಹಿಂದೆ ದಿಗಂತ್ (Diganth Manchale) ಅವರು ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಅವರು ಚೇತರಿಸಿಕೊಂಡಿದ್ದರು. ಈಗ ಅವರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಡೆಯಲು ಕೂಡ ಅವರಿಗೆ ಕಷ್ಟ ಆಗುತ್ತಿದೆ. ಅದರ ನಡುವೆಯೂ ತಮ್ಮ ಸಿನಿಮಾದ ಕಾರ್ಯಕ್ರಮಕ್ಕೆ ಬಂದು ಅವರು ಜ್ಯೋತಿ ಬೆಳಗಿದ್ದಾರೆ. ಮತ್ತೊಬ್ಬರ ಸಹಾಯ ಪಡೆದು ವೇದಿಕೆ ಏರಿದ್ದಾರೆ. ಅವರಿಗೆ ಪತ್ನಿ ಐಂದ್ರಿತಾ ರೇ (Aindrita Ray) ಸಾಥ್ ನೀಡಿದ್ದಾರೆ. ದಿಗಂತ್ ಅವರ ಡೆಡಿಕೇಷನ್ ಕಂಡು ಚಿತ್ರತಂಡದವರು ಮತ್ತು ಅಭಿಮಾನಿಗಳು ಭೇಷ್ ಎಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 23, 2022 04:25 PM
Latest Videos