ಕಾಂತರಾಜ್ ಆಯೋಗ ಸಂಗ್ರಹಿಸಿದ ದತ್ತಾಂಶಗಳನ್ನು ಆಧರಿಸಿ ನಾವು ತಯಾರಿಸಲಿರುವ ವರದಿಯೇ ಜಾತಿಗಣತಿಯ ಮೂಲಪ್ರತಿ: ಜಯಪ್ರಕಾಶ್ ಹೆಗ್ಡೆ

|

Updated on: Nov 22, 2023 | 6:35 PM

ಆ ದತ್ತಾಂಶದ ಆಧಾರದ ಮೇಲೆಯೇ ತಮ್ಮ ಆಯೋಗ ಜಾತಿಗಣತಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲಿದೆ ಎಂದು ಹೇಳಿದ ಅವರು ತಾವು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯೇ ಮೂಲಪ್ರತಿ ಅನಿಸಿಕೊಳ್ಳುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಡಿಸೆಂಬರ್-ಜನೆವರಿ ಒಳಗೆ ಸಲ್ಲಿಸಲು ಹೇಳಿದ್ದು ಅಷ್ಟರೊಳಗೆ ಸಲ್ಲಿಸಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಬೆಂಗಳೂರು: ಜಾತಿ ಜನಗಣತಿ ಮೂಲ ಪ್ರತಿ ಕಾಣೆಯಾಗಿದೆ ಅಂತ ದೊಡ್ಡಮಟ್ಟದ ಚರ್ಚೆ ಶುರುವಾಗಿರುವ ಹಿನ್ನೆಲೆಯಲ್ಲಿ ಟಿವಿ ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತಾಡಿದ್ದಾರೆ. ಹೆಗ್ಡೆ ಅವರು ಹೇಳುವ ಪ್ರಕಾರ ಜಾತಿಗಣತಿಯನ್ನು ನಡೆಸಿದ ಕಾಂತರಾಜ್ ಅಯೋಗದ ವರ್ಕ್ ಶೀಟ್ ಗಳು ಮಾತ್ರ ಸಿಕ್ಕಿಲ್ಲ, ಅದರೆ ದತ್ತಾಂಶ ಸೇಫ್ ಆಗಿದೆ. ಹಿಂದಿನ ಆಯೋಗದ ಅಧ್ಯಕ್ಷರು, ಸದಸ್ಯರು, ಸದಸ್ಯ-ಕಾರ್ಯದರ್ಶಿ ಸಹಿ ಮಾಡಿರುವ ಹಾರ್ಡ್ ಕಾಪಿ ಮತ್ತು ಮುದ್ರಿತ ಪ್ರತಿ ಸುರಕ್ಷಿತವಾಗಿರುವ ಬಗ್ಗೆ ಯಾವುದೇ ಅನುಮಾನ ಇಟ್ಟಿಕೊಳ್ಳಬೇಕಿಲ್ಲ ಎಂದು ಅವರು ಹೇಳಿದರು. ಅಷ್ಟು ಮಾತ್ರವಲ್ಲದೆ, ದತ್ತಾಂಶ ಮತ್ತು ಉಳಿದೆಲ್ಲ ವಿವರಗಳ ಸಾಫ್ಟ್ ಕಾಪಿಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯವರು ಅಪ್ಲೋಡ್ ಸಹ ಮಾಡಿಟ್ಟಿದ್ದಾರೆಂದು ಹೆಗ್ಡೆ ಹೇಳಿದರು. ಆ ದತ್ತಾಂಶದ ಆಧಾರದ ಮೇಲೆಯೇ ತಮ್ಮ ಆಯೋಗ ಜಾತಿಗಣತಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲಿದೆ ಎಂದು ಹೇಳಿದ ಅವರು ತಾವು ಸರ್ಕಾರಕ್ಕೆ ಸಲ್ಲಿಸಲಿರುವ ವರದಿಯೇ ಮೂಲಪ್ರತಿ ಅನಿಸಿಕೊಳ್ಳುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಡಿಸೆಂಬರ್-ಜನೆವರಿ ಒಳಗೆ ಸಲ್ಲಿಸಲು ಹೇಳಿದ್ದು ಅಷ್ಟರೊಳಗೆ ಸಲ್ಲಿಸಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ