IND vs SA 2ನೇ ಟೆಸ್ಟ್: ಕೇಪ್​ಟೌನ್​ಗೆ ಆಗಮನಿಸಿದ ಟೀಮ್ ಇಂಡಿಯಾ ಆಟಗಾರರು: ವಿಡಿಯೋ

|

Updated on: Jan 01, 2024 | 12:15 PM

Team India reached Cape Town: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ ಶುರುವಾಗಲಿದೆ. ಇದೀಗ ಈ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಕೇಪ್‌ಟೌನ್‌ಗೆ ತಲುಪಿದೆ. ಈ ಕುರಿತು ಬಿಸಿಸಿಐ ವಿಡಿಯೋ ಶೇರ್ ಮಾಡಿದೆ.

ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಜನವರಿ 1, 2024 ರಂದು ದಕ್ಷಿಣ ಆಫ್ರಿಕಾ ವಿರುದ್ಧದ (India vs South Africa) ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಕೇಪ್‌ಟೌನ್‌ಗೆ ಆಗಮಿಸಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಆಟಗಾರರು ಕೇಪ್‌ಟೌನ್‌ ತಲುಪಿದ ವಿಡಿಯೋವನ್ನು ಹಂಚಿಕೊಂಡಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಜನವರಿ 3 ರಿಂದ ಶುರುವಾಗಲಿದೆ. ಎರಡು ಟೆಸ್ಟ್‌ಗಳ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ 0-1 ಹಿನ್ನಡೆಯಲ್ಲಿರುವ ಕಾರಣ ಟೀಮ್ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಮೊದಲ ಟೆಸ್ಟ್​ನಲ್ಲಿ ಭಾರತ ಇನ್ನಿಂಗ್ಸ್ ಹಾಗೂ 32 ರನ್ ಗಳಿಂದ ಸೋಲು ಕಂಡಿತ್ತು. ಈ ಸೋಲಿನ ಸೇಡು ತೀರಿಸಿಕೊಂಡು ಟೀಮ್ ಇಂಡಿಯಾ ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಲು ಸಜ್ಜಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ