IND vs SA, ICC World Cup: ಮುಂದಿನ ಪಂದ್ಯಕ್ಕಾಗಿ ಕೋಲ್ಕತ್ತಾ ತಲುಪಿದ ಟೀಮ್ ಇಂಡಿಯಾ-ಆಫ್ರಿಕಾ ಆಟಗಾರರು

IND vs SA, ICC World Cup: ಮುಂದಿನ ಪಂದ್ಯಕ್ಕಾಗಿ ಕೋಲ್ಕತ್ತಾ ತಲುಪಿದ ಟೀಮ್ ಇಂಡಿಯಾ-ಆಫ್ರಿಕಾ ಆಟಗಾರರು

Vinay Bhat
|

Updated on: Nov 03, 2023 | 12:23 PM

Team India in Kolkata, India vs South Africa: ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು ಕೋಲ್ಕತ್ತಾ ತಲುಪಿದ್ದಾರೆ. ಭಾರತ ಇಂದು ಬೆಳಗ್ಗೆ ಕೋಲ್ಕತ್ತಾಕ್ಕೆ ಹೊರಟರೆ ಆಫ್ರಿಕಾ ಪ್ಲೇಯರ್ಸ್ ಗುರುವಾರ ಸಂಜೆ ತಲುಪಿದರು. ಪಾಯಿಂಟ್ ಟೇಬಲ್​ನಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ತಂಡಗಳ ನಡುವಣ ಕಾದಾಟಕ್ಕೆ ಭಾನುವಾರ ವಿಶ್ವ ಕ್ರಿಕೆಟ್ ಸಾಕ್ಷಿಯಾಗಲಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾನುವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡ ಪ್ರಸಿದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮುಖಾಮುಖಿ ಆಗಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರು ಕೋಲ್ಕತ್ತಾ ತಲುಪಿದ್ದಾರೆ. ಭಾರತೀಯ ಆಟಗಾರರು ಇಂದು ಬೆಳಗ್ಗೆ ಕೋಲ್ಕತ್ತಾಕ್ಕೆ ಹೊರಟರೆ, ಆಫ್ರಿಕಾ ಪ್ಲೇಯರ್ಸ್ ಗುರುವಾರ ಸಂಜೆ ತಲುಪಿದರು. ಭಾರತ-ಆಫ್ರಿಕಾ ಪಂದ್ಯ ನಡೆಯಲಿರುವ ದಿನ ನವೆಂಬರ್ 5 ಭಾನುವಾರದಂದು ವಿರಾಟ್ ಕೊಹ್ಲಿ ಅವರ ಜನ್ಮದಿನ ಕೂಡ ಆಗಿದ್ದು, ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಪಾಯಿಂಟ್ ಟೇಬಲ್​ನಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ತಂಡಗಳ ನಡುವಣ ಕಾದಾಟಕ್ಕೆ ವಿಶ್ವ ಕ್ರಿಕೆಟ್ ಸಾಕ್ಷಿಯಾಗಲಿದೆ. ಎಲ್ಲ ಟಿಕೆಟ್​ಗಳು ಸೋಲ್ಡ್ ಆಗಿದ್ದು, ಕಿಕ್ಕಿರಿದ ಮೈದಾನದಲ್ಲಿ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ