ಕಾಂಗ್ರೆಸ್ ಶಾಸಕರ ಪೈಕಿ ಹಲವಾರು ಅಜಿತ್ ಪವಾರ್ಗಳು ಅಂತ ಹೇಳಿ ಈಶ್ವರಪ್ಪ ಚಕಿತಗೊಳಿಸಿದರು!
ಅಜಿತ್ ಪವಾರ್ ಈಗ ಮಹಾರಾಷ್ಟ್ರ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರೋ ಅಂಶ ಅವರು ಮರೆತುಬಿಟ್ಟರು ಅನಿಸುತ್ತದೆ! ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ, ಆಶ್ವಸನೆಗಳನ್ನು ನೀಡಿ ಈಗ ಈಡೇರಿಸದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಬೆಂಗಳೂರು: ನಿನ್ನೆ ದೆಹಲಿಗೆ ತೆರಳಿದ್ದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS EShwarappa) ವಾಪಸ್ಸು ಬಂದಿದ್ದು ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡುವಾಗ; ನಿನ್ನೆ ಸಿದ್ದರಾಮಯ್ಯ (Siddaramaiah), 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಅಂತ ಹೇಳಿದ್ದನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿ ಹಾಗೆ ಹೇಳಿದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಅನ್ನುತ್ತಾರೆ. ಶಿವಕುಮಾರ್ ಆಡಿದ ಮಾತಿನ ಅರ್ಥ ಸ್ಪಷ್ಟವಾಗಿದೆ, ಸಿದ್ದರಾಮಯ್ಯ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಇರಲ್ಲ ಅಂತ ಹೇಳಿದ ಈಶ್ವರಪ್ಪ ಕೆಲ ವಾರಗಳ ಹಿಂದೆ ಸಿದ್ದರಾಮಯ್ಯ ತಮ್ಮ ಶಾಸಕರ ವಿಷಯದಲ್ಲೇ ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ಉತ್ತರ ನೀಡಲ್ಲ ಅಂತ ಹೇಳಿದಾಗ ಶಾಸಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಅಂತ ಹೇಳಿದರು. ಶಾಸಕರಲ್ಲಿ ಕೆಲವರು ಸಿದ್ದರಾಮಯ್ಯ ಪರವಿದ್ದರೆ ಇನ್ನುಳಿದವರು ಶಿವಕುಮಾರ್ ಪರವಾಗಿದ್ದಾರೆ, ಆದರೆ ಪಕ್ಷದಲ್ಲಿ ಸಾಕಷ್ಟು ಜನ ಅಜಿತ್ ಪವಾರ್ ಗಳು ಹುಟ್ಟಿಕೊಂಡಿದ್ದಾರೆ ಅಂತ ಹೇಳಿ ಆಶ್ಚರ್ಯ ಮೂಡಿಸಿದರು. ಅಜಿತ್ ಪವಾರ್ ಈಗ ಮಹಾರಾಷ್ಟ್ರ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರೋ ಅಂಶ ಅವರು ಮರೆತುಬಿಟ್ಟರು ಅನಿಸುತ್ತದೆ! ಅಧಿಕಾರಕ್ಕೆ ಬರುವ ಮೊದಲು ಗ್ಯಾರಂಟಿ, ಆಶ್ವಸನೆಗಳನ್ನು ನೀಡಿ ಈಗ ಈಡೇರಿಸದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ