ದೆಹಲಿಯಲ್ಲಿ ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ; ಚಿಕ್ಕ ಗಾಯದೊಂದಿಗೆ ಪಾರಾದ ಉಡುಪಿ ಪೇಜಾವರ ಶ್ರೀ

ದೆಹಲಿಯಲ್ಲಿ ತುಲಾಭಾರದ ವೇಳೆ ಕಳಚಿ ಬಿದ್ದ ತಕ್ಕಡಿ ಹಗ್ಗ; ಚಿಕ್ಕ ಗಾಯದೊಂದಿಗೆ ಪಾರಾದ ಉಡುಪಿ ಪೇಜಾವರ ಶ್ರೀ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಸಾಧು ಶ್ರೀನಾಥ್​

Updated on:Nov 03, 2023 | 4:30 PM

Shri Vishwaprasanna Tirtha Swamiji of Shri Pejawar Math: ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿತ್ತು. ಆ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ. ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ.

ಉಡುಪಿ, ನವೆಂಬರ್ 3: ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ಅಚಾತುರ್ಯ ಘಟನೆಯೊಂದು ನಡೆದಿದೆ. ಸುದೈವ ಹೆಚ್ಚಿನ ಅನಾಹುತವೇನೂ ಆಗಿಲ್ಲ. ಪ್ರಸ್ತುತ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Shri Vishwaprasanna Tirtha Swamiji of Shri Pejawar Math) ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮಹತ್ವದ ಧಾರ್ಮಿಕ ಆಚರಣೆಯಾದ ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳಿಗೆ ಭಕ್ತರು ತುಲಾಭಾರ ಸೇವೆ (thulabhara seva) ನಡೆಸುತ್ತಿದ್ದಾಗ ಈ ಅಚಾತುರ್ಯ ನಡೆದಿದೆ.

ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿತ್ತು. ಆ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ. ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ. ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಭಕ್ತರು ಆತಂಕಗೊಂಡರು. ಆದರೆ ಕೈ ಸನ್ನೆಯ ಮೂಲಕ ತಮಗೆ ಏನೂ ಆಗಿಲ್ಲ ಎಂದು ಪೇಜಾವರ ಶ್ರೀ ನಗುಮುಖ ಸೂಸಿದ್ದಾರೆ.

ನಾನು ಆರಾಮವಾಗಿದ್ದೇನೆ. ಆತಂಕ ಪಡಬೇಡಿ – ಸ್ವಾಮೀಜಿ ಪ್ರತಿಕ್ರಿಯೆ

ಈ ಬಗ್ಗೆ ದೆಹಲಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು, ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಹಗ್ಗ ನನ್ನ ತಲೆಯ ಮೇಲೆ ಕಳಚಿ ಬಿತ್ತು. ಅದರಿಂದಾದ ಗಾಯ ಪೂರ್ಣ ಮಾಸಿಹೋಗಿದೆ. ಗಾಯದ ಕುರುಹು ಸಹ ಇಲ್ಲದಂತೆ ವಾಸಿಯಾಗಿದೆ. ದೊಡ್ಡ ಗಾಯ ಏನೂ ಆಗಿಲ್ಲ, ನಾನು ಆರಾಮವಾಗಿದ್ದೇನೆ. ಯಾರು ಗಾಬರಿಯಾಗಬೇಕಾಗಿಲ್ಲ, ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Nov 03, 2023 03:00 PM