Tecno Camon 30 5G: ಟೆಕ್ನೋ ಲೇಟೆಸ್ಟ್ ಸ್ಮಾರ್ಟ್​​ಫೋನ್ ದೇಶದಲ್ಲಿ ಬಿಡುಗಡೆ

ಕಿರಣ್​ ಐಜಿ

Updated on: May 23, 2024 | 7:29 AM

ಸೂಪರ್ ಫೀಚರ್ಸ್ ಇರುವ ಸ್ಮಾರ್ಟ್​​ಫೋನ್ ಬಿಡುಗಡೆ ಮಾಡುವ ಟೆಕ್ನೋ, ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಪರಿಚಯಿಸಿದೆ. ದೇಶದಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್ 30 5G ಸರಣಿ ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಇದರಲ್ಲಿ ಟೆಕ್ನೋ ಕ್ಯಾಮನ್ 30 5G ಮತ್ತು ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಎಂಬ ಎರಡು ಫೋನುಗಳಿವೆ.

ಬಜೆಟ್ ದರದ ಫೋನ್​ಗಳಿಂದ ಆರಂಭಿಸಿ, ಸೂಪರ್ ಫೀಚರ್ಸ್ ಇರುವ ಸ್ಮಾರ್ಟ್​​ಫೋನ್ ಬಿಡುಗಡೆ ಮಾಡುವ ಟೆಕ್ನೋ, ಮತ್ತೊಂದು ಆಕರ್ಷಕ ಸ್ಮಾರ್ಟ್​​ಫೋನ್ ಪರಿಚಯಿಸಿದೆ. ದೇಶದಲ್ಲಿ ನೂತನವಾಗಿ ಟೆಕ್ನೋ ಕ್ಯಾಮನ್ 30 5G ಸರಣಿ ಸ್ಮಾರ್ಟ್​ಫೋನ್ ರಿಲೀಸ್ ಆಗಿದೆ. ಇದರಲ್ಲಿ ಟೆಕ್ನೋ ಕ್ಯಾಮನ್ 30 5G ಮತ್ತು ಟೆಕ್ನೋ ಕ್ಯಾಮನ್ 30 ಪ್ರೀಮಿಯರ್ 5G ಎಂಬ ಎರಡು ಫೋನುಗಳಿವೆ. ಎರಡೂ ಹ್ಯಾಂಡ್‌ಸೆಟ್‌ಗಳು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿವೆ. ಈ ಸ್ಮಾರ್ಟ್​​ಫೋನ್​ಗಳಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಗಳನ್ನು ನೀಡಿದ್ದು, ಆಂಡ್ರಾಯ್ಡ್ 14 ಔಟ್-ಆಫ್-ದಿ-ಬಾಕ್ಸ್ ಆಧಾರಿತ HiOS 14 ಮೂಲಕ ರನ್ ಆಗುತ್ತವೆ. ಪ್ರೀಮಿಯರ್ ಮಾದರಿಯು ಮೂರು 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಜೊತೆಗೆ ಬಲಿಷ್ಠವಾದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ. ಹೊಸ ಫೋನುಗಳ ಬೆಲೆ, ಫೀಚರ್ಸ್ ವಿವರ ಇಲ್ಲಿದೆ.

Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.