Video: ಕಾಂಗ್ರೆಸ್​ ಶಾಸಕರ ಕಚೇರಿ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ ರೈತ ದಂಪತಿ

Updated on: Aug 01, 2025 | 12:50 PM

ಕಾಂಗ್ರೆಸ್ ಶಾಸಕರ ಕಚೇರಿ ಆವರಣದಲ್ಲಿ ರೈತರು ಎಮ್ಮೆಗಳನ್ನು ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ದಂಪತಿ ಭೂಪಾಲಪಲ್ಲಿಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ್ದಾರೆ.ಅವರು ತಮ್ಮ ಮನೆಯ ಕೊಟ್ಟಿಗೆಯನ್ನು ಕೆಡವಲು ಅವರೇ ಕಾರಣ ಎಂದು ಆರೋಪಿಸಿದ್ದಾರೆ. ವೇಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೆಲು ಮತ್ತು ಲಲಿತಾ ಎಂಬ ರೈತರಾದ ತಮ್ಮ ಎಮ್ಮೆಗಳ ಕೊಟ್ಟಿಗೆಯನ್ನು ಯಾವುದೇ ಮುನ್ಸೂಚನೆ ನೀಡದೆ ಕೆಡವಲಾಗಿದೆ ಎಂದು ಅವರು ಆರೋಪಿಸಿದರು.

ತೆಲಂಗಾಣ, ಆಗಸ್ಟ್​ 01: ಕಾಂಗ್ರೆಸ್ ಶಾಸಕರ ಕಚೇರಿ ಆವರಣದಲ್ಲಿ ರೈತ ದಂಪತಿ ಎಮ್ಮೆಗಳನ್ನು ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ದಂಪತಿ ಭೂಪಾಲಪಲ್ಲಿಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ್ದಾರೆ.ಅವರು ತಮ್ಮ ಮನೆಯ ಕೊಟ್ಟಿಗೆಯನ್ನು ಕೆಡವಲು ಅವರೇ ಕಾರಣ ಎಂದು ಆರೋಪಿಸಿದ್ದಾರೆ. ವೇಶಲ್ಲಪಲ್ಲಿ ಗ್ರಾಮದ ಕೂರಕುಲ ಒಡೆಲು ಮತ್ತು ಲಲಿತಾ ಎಂಬ ರೈತರು ತಮ್ಮ ಎಮ್ಮೆಗಳ ಕೊಟ್ಟಿಗೆಯನ್ನು ಯಾವುದೇ ಮುನ್ಸೂಚನೆ ನೀಡದೆ ಕೆಡವಲಾಗಿದೆ ಎಂದು ಅವರು ಆರೋಪಿಸಿದರು.

ಶಾಸಕರು ಹೇಳಿದ ಕಾರಣ ಸ್ಥಳೀಯ ಅಧಿಕಾರಿಗಳು ಕೆಡವಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎಮ್ಮೆಗಳಿಗೆ ಆಶ್ರಯವಿಲ್ಲದ ಕಾರಣ ಇಲ್ಲಿ ಕಟ್ಟಿಹಾಕುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. ಎಮ್ಮೆಗಳಿಗೆ ಹೊಸ ಶೆಡ್ ನಿರ್ಮಿಸುವವರೆಗೆ ಅವುಗಳನ್ನು ಇಲ್ಲಿಯೇ ಕಟ್ಟಿಹಾಕುತ್ತೇವೆ ಎಂದು ತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More