ಶಿವರಾಮ್ ಅವರೊಟ್ಟಿಗಿನ ಒಡನಾಟ ನೆನದು ಭಾವುಕರಾದ ಟೆನ್ನಿಸ್ ಕೃಷ್ಣ

|

Updated on: Feb 29, 2024 | 11:39 PM

Tennis Krishna: ಕನ್ನಡದ ಜನಪ್ರಿಯ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಕೆ ಶಿವರಾಮ್ ಅವರೊಟ್ಟಿಗೆ ಆತ್ಮೀಯ ಗೆಳೆತನ ಹೊಂದಿದ್ದರು. ಶಿವರಾಮ್ ಅವರ ಅಂತಿಮ ದರ್ಶನ ಪಡೆದು ಹಳೆಯ ನೆನಪುಗಳನ್ನು ಟೆನ್ನಿಸ್ ಕೃಷ್ಣ ಹಂಚಿಕೊಂಡರು.

ಸಿನಿಮಾ ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ (K Shivaram) ಇಂದು (ಫೆಬ್ರವರ 29) ನಿಧನ ಹೊಂದಿದ್ದಾರೆ. ಸಿನಿಮಾ ರಂಗ, ರಾಜಕೀಯದಲ್ಲಿ ಹಲವು ಸ್ನೇಹಿತರನ್ನು ಶಿವರಾಮ್ ಅವರು ಹೊಂದಿದ್ದಾರೆ. ಸಿನಿಮಾ ರಂಗದ ಹಲವು ಗೆಳೆಯರಲ್ಲಿ ಟೆನ್ನಿಸ್ ಕೃಷ್ಣ ಸಹ ಒಬ್ಬರು. ಅವರ ಮೊದಲ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’ನಲ್ಲಿ ಟೆನ್ನಿಸ್ ಕೃಷ್ಣ ಸಹ ನಟಿಸಿದ್ದರು. ಶಿವರಾಮ್ ಅವರ ಅಂತಿಮ ದರ್ಶನ ಪಡೆದ ನಟ ಟೆನ್ನಿಸ್ ಕೃಷ್ಣ, ತಮ್ಮ ಹಾಗೂ ಶಿವರಾಮ್ ಅವರ ಒಡನಾಟವನ್ನು ನೆನಪು ಮಾಡಿಕೊಂಡರು. ಶಿವರಾಮ್ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ ಟೆನ್ನಿಸ್ ಕೃಷ್ಣ, ಶಿವರಾಮ್ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ