‘ಬಡವರಿಗಾಗಿ 11 ಸಾವಿರ ಮನೆ ಕಟ್ಟಿಸಿದ್ದರು ಕೆ ಶಿವರಾಮ್’
K Shivaram: ಮಾಜಿ ಐಎಎಸ್ ಅಧಿಕಾರಿ, ಚಲನಚಿತ್ರ ನಟ, ರಾಜಕಾರಣಿ ಕೆ ಶಿವರಾಮ್ ನಿಧನ ಹೊಂದಿದ್ದು, ಛಲವಾದಿ ಮಹಾಸಭಾ ಸಂಘಟನೆಯ ಮುಖಂಡರೊಬ್ಬರು ಶಿವರಾಮ್ ಅವರು ಮಾಡಿದ ಸಾಧನೆಗಳ ಬಗ್ಗೆ ಮಾತನಾಡಿದರು.
ಮಾಜಿ ಐಎಎಸ್ ಅಧಿಕಾರಿ, ಚಲನಚಿತ್ರ ನಟ, ರಾಜಕಾರಣಿ ಕೆ ಶಿವರಾಮ್ (K Shivaram) ಇಂದು (ಫೆಬ್ರವರಿ 29) ನಿಧನರಾಗಿದ್ದಾರೆ. ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿದ್ದಾಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಹಲವಾರು ಜನಪರ ಕಾರ್ಯಗಳನ್ನು ಅವರು ಮಾಡಿದ್ದರು. ನಿವೃತ್ತಿ ಬಳಿಕ ರಾಜಕಾರಣದಲ್ಲಿ ಸಕ್ರಿಯರಾದ ಶಿವರಾಮ್, ಛಲವಾದಿ ಮಹಾಸಭಾದ ಅಧ್ಯಕ್ಷರೂ ಆಗಿದ್ದರು. ಶಿವರಾಮ್ ಅನಾರೋಗ್ಯದ ಸುದ್ದಿ ತಿಳಿದು ಇಂದು ಆಸ್ಪತ್ರೆ ಬಳಿಗೆ ಛಲವಾದಿ ಮಹಾಸಭಾದ ಹಲವು ಮುಖಂಡರು ಆಗಮಿಸಿದ್ದರು. ಆನೆಕಲ್ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಶಿವರಾಮ್ ಅವರ ಬಗ್ಗೆ ಮಾತನಾಡುತ್ತಾ, ಶಿವರಾಮ್ ಅವರು ದಾವಣಗೆರೆಯಲ್ಲಿ ಬಡವರಿಗಾಗಿ 11 ಸಾವಿರ ಮನೆಗಳನ್ನು ನಿರ್ಮಿಸಿದ್ದರು ಎಂದರು. ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿ ಅಭೂತಪೂರ್ವ ಸೇವೆಗಳನ್ನು ಬಡವರಿಗಾಗಿ ಮಾಡಿದ್ದಾರೆ ಎಂದು ಭಾವುಕರಾದರು. ಇಲ್ಲಿದೆ ಪೂರ್ತಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos