ಕ್ಯೂಅರ್ ಕೋಡ್ ತೆಗೆದಿಟ್ಟ ಧಾಬಾ ಮಾಲೀಕ, ಯುಪಿಐ ಬಿಟ್ಟರೆ ಬೇರೆ ಮಾರ್ಗವಿಲ್ಲ ಎಂದ ಗ್ರಾಹಕ

ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2025 | 3:43 PM

ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಧಾಬಾ ಮಾಲೀಕ, ಯುಪಿಐ ಮೂಲಕ ಹಣ ಸ್ವೀಕರಿಸುವುದು ಸಮಸ್ಯೆ ಸೃಷ್ಟಿಸುತ್ತಿರುವುದರಿಂದ ಅದನ್ನು ತೆಗೆದು ಬಿಟ್ಟಿದ್ದೇವೆ, ಅದ್ರೆ ಜನ ಫೋನ್​ಗಳ ಮೂಲಕವೇ ಪೇಮೆಂಟ್ ಮಾಡಲು ಮುಂದಾಗುತ್ತಿದ್ದಾರೆ. ಸರ್ಕಾರ ಏನಾದರೂ ಬದಲೀ ವ್ಯವಸ್ಥೆ ಮಾಡಬೇಕು, ವಾಣಿಜ್ಯ ತೆರಿಗೆಯನ್ನು ತಾವು ಲಕ್ಷಗಟ್ಟಲೆ ನೀಡಲಾಗಲ್ಲ ಎಂದು ಹೇಳುತ್ತಾರೆ.

ಧಾರವಾಡ, ಜುಲೈ 19: ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯವರು ಸಣ್ಣಪುಟ್ಟ ವ್ಯಾಪಾರಿಗಳಿಗೆ, ತರಕಾರಿ ಮಾರುವವರಿಗೆ ಹೋಟೆಲ್, ಧಾಬಾ ನಡೆಸುವವರಿಗೆ ಕಳಿಸುತ್ತಿರುವ ಭಾರೀ ಮೊತ್ತದ ಟ್ಯಾಕ್ಸ್ ನೋಟೀಸ್​ಗಳು (tax notice) ತಲ್ಲಣ ಸೃಷ್ಟಿಸಿವೆ. ಯುಪಿಐ ಮೂಲಕ ಹಣ ಸ್ವೀಕರಿಸುವುದೇ ಬೇಡ ಎಂಬ ನಿರ್ಣಯಕ್ಕೆ ಬಹಳಷ್ಟು ವ್ಯಾಪಾರಿಗಳು ಬಂದಂತಿದೆ. ಧಾರವಾಡ ನಗರದ ಹೊರವಲಯದಲ್ಲಿ ಧಾಬಾವೊಂದನ್ನು ನಡೆಸುವ ವ್ಯಕ್ತಿಯೊಬ್ಬರು ತಮ್ಮ ಕ್ಯಾಶ್ ಕೌಂಟರ್ ಮೇಲೆ ನಗದು ಮಾತ್ರ ಬರೆದುಬಿಡುವ ಜೊತೆಗೆ ಬ್ಯಾಂಕ್​ನವರು ನೀಡಿದ್ದ ಕ್ಯೂಅರ್ ಕೋಡ್ ಅನ್ನು ತೆಗೆದುಬಿಟ್ಟಿದ್ದಾರೆ. ಅದರೆ ಗ್ರಾಹಕರೊಬ್ಬರು ತನ್ನಲ್ಲಿ ಯುಪಿಐ ಮೂಲಕ ಹಣ ನೀಡುವವುದನ್ನು ಬಿಟ್ರೆ ಬೇರೆ ಆಪ್ಷನ್ ಇಲ್ಲವೆನ್ನುತ್ತಿದ್ದಾರೆ. ಎಂಥ ಸಂದಿಗ್ಧತೆ ಇದು?

ಇದನ್ನೂ ಓದಿ:   ತಪ್ಪದ ಕಮರ್ಷಿಯಲ್ ಟ್ಯಾಕ್ಸ್ ಬವಣೆ, ಸರ್ಕಾರಕ್ಕೆ ಪಾಠ ಕಲಿಸಲು ಮುಂದಾದ ಸಣ್ಣ ವರ್ತಕರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.