ಮತ್ತೊಮ್ಮೆ ಕೆರೆಯಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು 15 ನಿಮಿಷದಲ್ಲಿ ಹುಡುಕಿ ವಾರಸುದಾರರಿಗೆ ಒಪ್ಪಿಸಿದ ಈಶ್ವರ್ ಮಲ್ಪೆ
ಕಾರ್ಕಳದ ರಾಮಸಮುದ್ರ ಕೆರೆಯಲ್ಲಿ ಕೆಸರು ತುಂಬಿಕೊಂಡಿದ್ದ ಕಾರಣ, ಸತತ 2 ದಿನ ಹುಡುಕಾಡಿದರೂ ಸರ ಸಿಕ್ಕಿರಲಿಲ್ಲ. ಕರೆ ಮೂಲಕ ವಿಚಾರ ತಿಳಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿ, ಯಶಸ್ವೀ ಕಾರ್ಯಾಚರಣೆ ನಡೆಸಿತ್ತು.
ಕಾರ್ಕಳದ ರಾಮಸಮುದ್ರ ಕೆರೆಯಲ್ಲಿ ಕಳೆದುಕೊಂಡಿದ್ದ ಅಮೂಲ್ಯ ಚಿನ್ನದ ಸರ (gold chain) ಹುಡುಕಿ ವಾರಿಸುದಾರರಿಗೊಪ್ಪಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಇತಿಹಾಸ ಪ್ರಸಿದ್ಧ ರಾಮಸಮುದ್ರ ಕೆರೆಯಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ನಿತಿನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು.
ನಿಂತ ನೀರಿನಲ್ಲಿ ಕೆಸರು ತುಂಬಿಕೊಂಡಿದ್ದ ಕಾರಣ, ಸತತ 2 ದಿನ ಹುಡುಕಾಡಿದರೂ ಸರ ಸಿಕ್ಕಿರಲಿಲ್ಲ. ಕರೆ ಮೂಲಕ ವಿಚಾರ ತಿಳಿದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿತು.
Also Read: ಸ್ವರ್ಣ ನದಿಯಲ್ಲಿ 2 ದಿನದ ಹಿಂದೆ ಕಳೆದುಕೊಂಡಿದ್ದ ಚಿನ್ನದ ಸರ ಕೊಲ್ಲೂರು ಮೂಕಾಂಬಿಕೆಯ ಬೇಡಿಕೊಂಡಿದ್ದಕ್ಕೆ ಅರ್ಧ ಗಂಟೆಯಲ್ಲಿ ಸಿಕ್ತು!
ಸ್ಥಳೀಯ ದೈವ ದೇವರಿಗೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿಗೆ ಕೈ ಮುಗಿದು ಬೇಡಿಕೊಂಡು ಕೆರೆಗಿಳಿದ ಆಪತ್ಭಾಂಧವ ಈಶ್ವರ್ ಮಲ್ಪೆ, ಕೇವಲ 15 ನಿಮಿಷದ ಅಂತರದಲ್ಲಿ ಹುಡುಕಾಡಿ ಸುಮಾರು 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮೇಲೆತ್ತಿ ವಾರಸುದಾರರಿಗೊಪ್ಪಿಸಿ ಮಾನವೀಯತೆ ಮೆರೆದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ