ಸ್ವರ್ಣ ನದಿಯಲ್ಲಿ 2 ದಿನದ ಹಿಂದೆ ಕಳೆದುಕೊಂಡಿದ್ದ ಚಿನ್ನದ ಸರ ಕೊಲ್ಲೂರು ಮೂಕಾಂಬಿಕೆಯ ಬೇಡಿಕೊಂಡಿದ್ದಕ್ಕೆ ಅರ್ಧ ಗಂಟೆಯಲ್ಲಿ ಸಿಕ್ತು!
Kollur Mookambika: ಎಂಐಟಿಯಲ್ಲಿ ವಿದ್ಯಾರ್ಥಿ ಸ್ವರ್ಣ ನದಿಯಲ್ಲಿ ಈಜಲು ಹೋಗಿದ್ದ ವೇಳೆ ಚಿನ್ನದ ಸರ ಕಳೆದುಕೊಂಡಿದ್ದ. 2 ದಿನ ಎಷ್ಟೇ ಹುಡುಕಾಡಿದ್ರೂ ಸಿಕ್ಕಿರಲಿಲ್ಲ. ಕೊನೆಗೆ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಸ್ಮರಿಸಿ ಬೇಡಿಕೊಂಡಿದ್ದಾನೆ. ಹೀಗೆ ಬೇಡಿಕೊಂಡ ಅರ್ಧ ಗಂಟೆಯಲ್ಲಿ 30 ಅಡಿ ನೀರಿನಲ್ಲಿ ಬಿದ್ದಿದ್ದ ಚಿನ್ನದ ಸರ ಸಿಕ್ಕಿದೆ.
ನದಿಯಲ್ಲಿ ಈಜಲು ಹೋಗಿ ಚಿನ್ನದ ಸರ ಕಳೆದುಕೊಂಡು ದಿಕ್ಕೇ ತೋಚದಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಪ್ರಾರ್ಥಿಸಿದ ಅರ್ಧ ಗಂಟೆಯಲ್ಲೇ ಚಿನ್ನದ ಸರ (gold chain) ಸಿಕ್ಕಿರುವ ಘಟನೆ ಪರ್ಕಳದ ಹೆರ್ಗ ಗ್ರಾಮದಲ್ಲಿ ನಡೆದಿದೆ. ಮಲ್ಪೆ ಮೂಲದ ಕಿಶನ್ ಕೋಟ್ಯಾನ್ ಮಣಿಪಾಲ ಎಂಐಟಿಯಲ್ಲಿ ವಿದ್ಯಾರ್ಥಿ ಈತ. ಸ್ನೇಹಿತರೊಂದಿಗೆ ಸ್ವರ್ಣ ನದಿಯಲ್ಲಿ (Swarna River) ಈಜಲು ಹೋಗಿದ್ದ ವೇಳೆ ಮೂರು ಲಕ್ಷ ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದ. ಎರಡು ದಿನ ಎಷ್ಟೇ ಹುಡುಕಾಡಿದ್ರೂ ಸಿಕ್ಕಿರಲಿಲ್ಲ.
ಕೊನೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಸಹಾಯಕ್ಕೆ ಧಾವಿಸಿ ಹುಡುಕಾಡಿದ್ರು ಆಗಲೂ ಸಿಗದಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು (Kollur Mookambika) ಸ್ಮರಿಸಿ ಬೇಡಿಕೊಂಡಿದ್ದಾನೆ. ಹೀಗೆ ಬೇಡಿಕೊಂಡ ಅರ್ಧ ಗಂಟೆಯಲ್ಲಿ 30 ಅಡಿ ನೀರಿನಲ್ಲಿ ಬಿದ್ದಿದ್ದ ಚಿನ್ನದ ಸರವು ಈಶ್ವರ್ ಮಲ್ಪೆ ಅವರಿಗೆ ಸಿಕ್ಕಿದೆ. ಹೀಗೆ ಸಿಕ್ಕಿರುವ ಚಿನ್ನದ ಸರವನ್ನ ಮಾಲೀಕ ಕಿಶನ್ ಅವರಿಗೆ ಹಸ್ತಾಂತರಿಸಿದ್ದಾರೆ. ಇದು ಪವಾಡವೋ, ಆಕಸ್ಮಿಕವೋ ಒಟ್ಟಾರೆ ಕಳೆದುಕೊಂಡಿದ್ದ ಚಿನ್ನದ ಸರ ಮತ್ತೆ ಪಡೆದ ಕಿಶನ್ ಫುಲ್ ಖುಷ್ ಆಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ