IND vs AUS 4th T30I: ರಿಂಕು ಸಿಂಗ್ 100 ಮೀಟರ್ ಉದ್ದದ ಸಿಕ್ಸ್ ಸಿಡಿಸಿದ್ದು ಹೇಗೆ?: ಅವರೇ ಹೇಳಿದ್ದಾರೆ ನೋಡಿ
Rinku Singh 100m Six: ರಾಯ್‌ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ಬರೋಬ್ಬರಿ 100 ಮೀಟರ್ ಉದ್ದದ ಸಿಕ್ಸರ್ ಸಿಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಇದೀಗ ಈ ಸಿಕ್ಸ್ ಬಗ್ಗೆ ರಿಂಕು ಮಾತನಾಡಿದ್ದಾರೆ.
ಶುಕ್ರವಾರ ರಾಯ್‌ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 20 ರನ್‌ಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ರಿಂಕು ಸಿಂಗ್ (Rinku Singh) 29 ಎಸೆತಗಳಲ್ಲಿ 46 ರನ್ ಗಳಿಸಿ ನೆರವಾದರು. ಅಲ್ಲದೆ ಜಿತೇಶ್ ಶರ್ಮಾ ಅವರೊಂದಿಗೆ ಐದನೇ ವಿಕೆಟಿಗೆ ಅಮೂಲ್ಯವಾದ 56 ರನ್‌ಗಳ ಜೊತೆಯಾಟ ನೀಡಿದರು. ಈ ಪಂದ್ಯದಲ್ಲಿ ರಿಂಕು ಬರೋಬ್ಬರಿ 100 ಮೀಟರ್ ಉದ್ದದ ಸಿಕ್ಸರ್ ಸಿಡಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಇದೀಗ ಈ ಸಿಕ್ಸ್ ಬಗ್ಗೆ ರಿಂಕು ಮಾತನಾಡಿದ್ದಾರೆ. “ನಾನು ಉತ್ತಮ ಆಹಾರವನ್ನು ತಿನ್ನುತ್ತೇನೆ ಮತ್ತು ಜಿಮ್‌ನಲ್ಲಿ ತೂಕ ಎತ್ತುವುದನ್ನು ನಾನು ಇಷ್ಟಪಡುತ್ತೇನೆ. ಇದು ನನಗೆ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ,” ಎಂದು ರಿಂಕು BCCI.tv ಪೋಸ್ಟ್ ಮಾಡಿದ ವಿಡಿಯೋದಲ್ಲಿ ಜಿತೇಶ್ ಶರ್ಮಾಗೆ ತಿಳಿಸಿದ್ದಾರೆ. ರಿಂಕು ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೂಡ ಆಯ್ಕೆ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ