Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್​ಗೆ ಈಗ ಒಂದು ಕೋಟಿ ಚಂದಾದಾರರು! ಉಳಿದ ಚಾನೆಲ್​ಗಳು ಗಾವುದ ದೂರ!!

ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್​ಗೆ ಈಗ ಒಂದು ಕೋಟಿ ಚಂದಾದಾರರು! ಉಳಿದ ಚಾನೆಲ್​ಗಳು ಗಾವುದ ದೂರ!!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2023 | 12:03 PM

ವಿದೇಶಗಳಲ್ಲೂ ಸಹಸ್ರಾರು ಚಂದಾದಾರರನ್ನು ಹೊಂದಿರುವ Tv9 Kannada Youtube ಚಾನೆಲ್ ಓಟ ನಿಲ್ಲಲ್ಲ, ನಮ್ಮದು ನಾಗಾಲೋಟ ಅಂತ ಕನ್ನಡಿಗರು ಸಾಬೀತು ಮಾಡಿದ್ದಾರೆ. ನಮ್ಮ ಯೂಟ್ಯೂಬ್ ವಿಸ್ತೃತವಾಗಿ ಬೆಳೆಯುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲೂ ಮೀರಿಸುವವರಿಲ್ಲ. ಮುಂದಿನ ಕೆಲವೇ ವರ್ಷಗಳಲ್ಲಿ 2 ಕೋಟಿ ಚಂದಾದಾರರನ್ನು ಹೊಂದುವುದು ನಮ್ಮ ಗುರಿ. ನಿಮ್ಮ ಅಭಿಮಾನ ಮತ್ತು ಪ್ರೀತಿಯಿಂದ ಅತ್ಯಂತ ವಿಶ್ವಾಸಾರ್ಹ ಚಾನೆಲ್ ಎನಿಸಿಕೊಂಡಿದ್ದು, ಗುಣಮಟ್ಟದ ಸುದ್ದಿಗಳನ್ನು ಎಂದಿನಂತೆ ನೀಡುತ್ತಲೇ ಇರುತ್ತೇವೆ.

ಬೆಂಗಳೂರು: ಬೇರೆ ಯೂಟ್ಯೂಬ್ ಚಾನೆಲ್ ಗಳು ಊಹಿಸಲಾಗದ್ದನ್ನು ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್ (Tv9 Kannada Youtube Channel) ಸಾಧಿಸಿಬಿಟ್ಟಿದೆ. ಕನ್ನಡನಾಡಿನ ಹೆಮ್ಮೆ ಮತ್ತು ಅಭಿಮಾನದ ಪ್ರತೀಕವಾಗಿರುವ Tv9 Kannada Youtube ಚಾನೆಲ್ ಚಂದಾದಾರರ (subscribers) ಸಂಖ್ಯೆ ಒಂದು ಕೋಟಿ ದಾಟಿದೆ! ಆಫ್ ಕೋರ್ಸ್, ಈ ಮೈಲಿಗಲ್ಲು (landmark) ಸ್ಥಾಪಿಸುವಲ್ಲಿ ನಮ್ಮ ತಂಡದ ಪರಿಶ್ರಮ ಮತ್ತು ದಣಿವರಿಯದ ದುಡಿಮೆ ಇದೆ, ಆದರೆ ಅದೆಲ್ಲಕ್ಕಿಂತ ಮಿಗಿಲಾದದ್ದು ಸಮಸ್ತ ಕನ್ನಡಿಗರ ಪ್ರೀತಿ ಮತ್ತು ವಿಶ್ವಾಸ. ಅದಿಲ್ಲದೆ ಹೋಗಿದ್ದರೆ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಾಮಾಣಿಕವಾಗಿ ಹೇಳುತ್ತೇವೆ. ‘ಉತ್ತಮ ಸಮಾಜಕ್ಕಾಗಿ’ ದ್ಯೇಯದೊಂದಿಗೆ 2006 ರಲ್ಲಿ ಆರಂಭಗೊಂಡ ಟಿವಿ9 ಕನ್ನಡ ವಾಹಿನಿ ಮಾರ್ಚ್ 18, 2010 ರಂದು ತನ್ನ ಯೂಟ್ಯೂಬ್ ಚಾನೆಲ್ ಲಾಂಚ್ ಮಾಡಿತು. ಮೊದಲೆಲ್ಲ ಒಂದರೆಡು ವಿಡಿಯೋಗಳು ಮಾತ್ರ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗುತ್ತಿದ್ದವು ಈಗ ದಿನವೊಂದಕ್ಕೆ ಸುಮಾರು 300 ವಿಡಿಯೋ ಅಪ್ಲೋಡ್ ಅಗುತ್ತಿವೆ.

ರಾಜಕೀಯ, ಕ್ರೀಡೆ, ಮನರಂಜನೆ, ಜ್ಯೋತಿಷ್ಯ, ಕಲೆ ಮತ್ತು ಸಂಸ್ಕೃತಿ, ಆಧ್ಯಾತ್ಮ, ರಾಶಿಫಲ-ಹೀಗೆ ಎಲ್ಲ ಕ್ಷೇತ್ರಗಳ ಸುದ್ದಿಗಳನ್ನು ನಿಮ್ಮ ಯೂಟ್ಯೂಬ್ ಚಾನೆಲ್ ನೀಡುತ್ತಿದೆ. 2020 ರಲ್ಲಿ ಆರಂಭವಾದ ಟಿವಿ9 ಕನ್ನಡ ವೆಬ್ ಸೈಟ್ ಸಹ ಕನ್ನಡದಲ್ಲಿ ನಂಬರ್ ಸ್ಥಾನ ಪಡೆದುಕೊಂಡಿದೆ ಅಂತ ಹೇಳಲು ಅತೀವ ಹೆಮ್ಮೆಯೆನಿಸುತ್ತದೆ. Tv9 Kannada Youtube ಚಾನೆಲ್ ಕೇವಲ 13 ವರ್ಷಗಳ ಅವಧಿಯಲ್ಲಿ ಕೋಟಿ ಚಂದಾದಾರರನ್ನು ಸಂಪಾದಿಸಿರುವುದು ಮತ್ತು ಅಷ್ಟು ಸದಸ್ಯರನ್ನು ಕುಟುಂಬದ ಭಾಗವಾಗಿ ಹೊಂದಿರುವ ಏಕಮಾತ್ರ ಚಾನೆಲ್ ಅಂತ ಹೇಳುವಾಗ ನಮ್ಮ ತಂಡದ ಸದಸ್ಯರ ಮೈನವಿರೇಳುತ್ತದೆ. ನಿಮಗೆ ‘ಕೋಟಿ’ ಧನ್ಯವಾದಗಳು!

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ