ಟಿವಿ9 ಯೂಟ್ಯೂಬ್ ಚಾನೆಲ್ ದಾಖಲೆ: 1 ಕೋಟಿ ಚಂದಾದಾರರನನ್ನು ಪಡೆದ ಮೊದಲ ಸುದ್ದಿ ವಾಹಿನಿ
ಈಗಾಗಲೇ ಕರ್ನಾಟಕದಲ್ಲಿ ಮನೆಮಾತಾಗಿರುವ ಟಿವಿ9 ಸುದ್ದಿ ವಾಹಿನಿ ಈಗ ಇನ್ನೊಂದು ದಾಖಲೆ ಸೃಷ್ಟಿಸಿದೆ. ಕನ್ನಡಿಗರ ನಂಬುಗೆ, ಬೆಂಬಲ, ವಿಶ್ವಾಸದಿಂದ ಈಗ ಒಂದು ಕೋಟಿ ಚಂದಾದಾರರ ಮನಸ್ಸನ್ನು ಗೆದ್ದು ಮುನ್ನುಗ್ಗುತ್ತಿದೆ. ಹಾಗಾದ್ರೆ, ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್ ನಡೆದು ಬಂದ ಹಾದಿ ಬಗ್ಗೆ ತಿಳಿಯಿರಿ.
ಧನ್ಯವಾದ ಕರ್ನಾಟಕ.. ಧನ್ಯವಾದ ಕನ್ನಡಿಗರೆ.. ಆ ದಿನ ಬಂದೇ ಬಿಟ್ಟಿದೆ. ನಿಮ್ಮ ನೆಚ್ಚಿನ Tv9 Kannada Youtube ಚಾನೆಲ್ನ ಕುಟುಂಬದ ಸದಸ್ಯರ ಸಂಖ್ಯೆ ಈಗ ಬರೋಬ್ಬರಿ ಒಂದು ಕೋಟಿ ಮುಟ್ಟಿದೆ. ಇದರೊಂದಿಗೆ ಮತ್ತಷ್ಟು ಮುನ್ನುಗ್ಗುತ್ತಿದ್ದು, ಕನ್ನಡಿಗರ ಮನೆ ಮನ ಮುಟ್ಟಿದ ಏಕೈಕ ಕನ್ನಡ ನ್ಯೂಸ್ ಚಾನೆಲ್ಗೆ ಮತ್ತೊಂದು ಹಿರಿಮೆಯ ಗರಿ ಸೇರ್ಪಡೆಯಾಗಿದೆ. ಇದು ನಾವು ನೀವು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವ ಎದೆತಟ್ಟಿ ಹೇಳಿಕೊಳ್ಳುವ ಸುಸಮಯ.
ಅಂದಹಾಗೆ, 2006ರಲ್ಲಿ TV9 ಕನ್ನಡ ಕರ್ನಾಟಕದಲ್ಲಿ ಉತ್ತಮ ಸಮಾಜಕ್ಕಾಗಿ ಅಂತ ಪ್ರಪ್ರಥಮ ಬಾರಿಗೆ 24/7 ಸುದ್ದಿ ಪ್ರಸಾರ ಶುರು ಮಾಡಿದ್ದು, ಅಂದಿನಿಂದ ಇಂದಿನವರೆಗೂ ಬರೋಬರಿ 17 ವರ್ಷಗಳಿಂದ ಅನ್ ಬೀಟೇಬಲ್ ನ್ಯೂಸ್ ಚಾನೆಲ್ ಆಗಿ ನಿಂತಿದೆ. ಎಷ್ಟೇ ನ್ಯೂಸ್ ಚಾನೆಲ್ಗಳು ಬಂದರೂ ಕನ್ನಡಿಗರು ಮಾತ್ರ ಟಿವಿ9 ಕನ್ನಡದ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆ ಕಡಿಮೆ ಆಗಿಲ್ಲ, ಆಗೋದು ಇಲ್ಲ ಅಂತ ಪದೇ ಪದೇ ಸಾಬೀತು ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಲ್ಲೂ ಟಿವಿ9 ಕನ್ನಡ ನ್ಯೂಸ್ ಚಾನೆಲ್ ಮತ್ತು ಡಿಜಿಟಲ್ ವೀಕ್ಷಕರಿದ್ದಾರೆ.
TV9 ಕನ್ನಡ ಕಾಲ ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡಿಗರ ಮನೆ ಮನಕ್ಕೂ ಮುಟ್ಟುವ ಪ್ರಯತ್ನ ಮಾಡುತ್ತಲೇ ಇದೆ. ಭಾರತದಲ್ಲಿ Youtube, FaceBook, Instagram, twiter, ವೆಬ್ಸೈಟ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ದುನಿಯಾ ಶುರುವಾದಾಗ, TV9 Kannada ಕೂಡ ಕನ್ನಡಿಗರಿಗೆ ಸುದ್ದಿ ಮತ್ತು ಮಾಹಿತಿ ಮುಟ್ಟಿಸಲು ಒಂದೆಜ್ಜೆ ಮುಂದೇ ಇತ್ತು.. ಮಾರ್ಚ್ 18, 2010ರಲ್ಲಿ ಟಿವಿ9 ಕನ್ನಡ Youtube ಚಾನಲ್ ಆರಂಭಿಸಿದ್ದು, ಈ ಪ್ಲಾಟ್ಫಾರಂನಲ್ಲೂ ಕನ್ನಡಿಗರಿಗೆ ಸುದ್ದಿ, ಮಾಹಿತಿ ಮುಟ್ಟಿಸುವ ಪ್ರಯತ್ನ ಮಾಡುತ್ತಿದೆ. ಅಂದಿನಿಂದ ಇಂದಿನವರೆಗೆ ಕೇವಲ 13 ವರ್ಷದಲ್ಲೇ 10 ಮಿಲಿಯನ್ ಸಬ್ Subscribers ಅಂದ್ರೆ ಬರೋಬ್ಬರಿ ಒಂದು ಕೋಟಿ ಚಂದಾದಾರರು ಆಗಿದ್ದಾರೆ. ಈ ಮೂಲಕ ಒಂದು ಕೋಟಿ ಸಬ್ಕ್ರೈಬರ್ಸ್ ಹೊಂದಿರುವ ಕನ್ನಡದ ಏಕೈಕ ನ್ಯೂಸ್ ಚಾನೆಲ್ ಎನ್ನುವ ಹಿರಿಮೆಗೂ ಪಾತ್ರವಾಗಿದೆ ನಿಮ್ಮ ನೆಚ್ಚಿನ ಟಿವಿ0 ಕನ್ನಡ.
ಯೂಟ್ಯೂಬ್ ಚಾನೆಲ್ ನಡೆದು ಹಾದಿ
ಇನ್ನೂ ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್ ನಡೆದು ಹಾದಿ ನೋಡೋದಾದ್ರೆ, ಟಿವಿ9 ಡಿಜಿಟಲ್ ಕ್ಷೇತ್ರಕ್ಕೆ ಅಂದರೆ ಯೂಟ್ಯೂಬ್ಗೆ ಕಾಲಿಟ್ಟಿದ್ದು 2010ರಲ್ಲಿ. ಆರಂಭದಲ್ಲಿ ದಿನಕ್ಕೆ ಒಂದೆರಡು ವಿಡಿಯೋ ಅಪ್ ಮಾಡಲಾಗುತ್ತಿತ್ತು. ಒಂದೆರಡು ವರ್ಷದ ನಂತರ 10 ವಿಡಿಯೋ ಅಪ್ ಮಾಡುತ್ತಿದ್ದದ್ದು 2020ರವೆರಗೆ ದಿನಕ್ಕೆ 60ಕ್ಕೆ ತಲಪಿತ್ತು. 2020ರ ನವಂಬರ್ನಲ್ಲಿ ಟಿವಿ9 ಡಿಜಿಟಲ್ ಸಂಸ್ಥೆಯನ್ನು ಅಧಿಕೃತವಾಗಿ ಹುಟ್ಟು ಹಾಕಲಾಯಿತು. ನಂತರ ದಿನಕ್ಕೆ 150 ವಿಡಿಯೋ ಅಪ್ ಆಗುತ್ತಿತ್ತು. ದಿನೇ ದಿನೇ ಇವುಗಳ ಸಂಖ್ಯೆ ಏರಿ ಈಗ ದಿನಕ್ಕೆ 250ರಿಂದ 300 ವಿಡೊಯೋ ಅಪ್ ಆಗುತ್ತಿದೆ. ವಿಡಿಯೋ ಜೊತೆಗೆ ಲೈವ್ ಸ್ಟ್ರೀಮ್, ಸಾರ್ಟ್ಸ್ ಕೂಡ ಅಪ್ ಮಾಡಲಾಗುತ್ತಿದೆ.
ಆರಂಭದ ಮೊದಲ 8 ವರ್ಷ ಕೇವಲ 2ಮಿಲಿಯನ್ನಷ್ಟಿದ್ದ ಚಂದಾದಾರರು 2019ರಲ್ಲಿ ಕರೋನಾ ಮಾರಿ ಬಂದಾಗ ದಿಢೀರ್ ಜಾಸ್ತಿಯಾಗ ತೊಡಗಿತು. ಕೊರೊನಾ ಕುರಿತಾದ ವಿಡಿಯೋ ನೋಡಲು ಟಿವಿ9 ಯೂಟ್ಯೂಬ್ ಗೆ ಮುಗಿಬಿದ್ದ ಜನರು ಲಕ್ಷ ಸಂಖ್ಯೆಯಲ್ಲಿ ಚಂದಾದಾರರಾದರು. ಕೇವಲ 2 ವರ್ಷದಲ್ಲಿ ಚಂದಾದಾರರ ಸಂಖ್ಯೆ 50ಲಕ್ಷಕ್ಕೆ ಏರಿತು. ನಂತರದ 3 ವರ್ಷದಲ್ಲಿ ಚಂದಾದಾರರ ಸಂಖ್ಯೆ ದ್ವಿಗುಣಗೊಂಡು 10 ಮಿಲಿಯನ್ ಗೆ ತಲಪಿತು. ಆ ಮೂಲಕ 1 ಕೋಟಿ ಚಂದಾದಾರರನ್ನು ಹೊಂದಿದ ಮೊದಲ ಮತ್ತು ಏಕೈಕ ನ್ಯೂಸ್ ಚಾನಲ್ ಟಿವಿ9ಕನ್ನಡ. ಇಡೀ ಕರ್ನಾಟಕದಲ್ಲಿ 10 ಮಿಲಿಯನ್ ಚಂದಾದಾರರನ್ನು ಹೊಂದಿರುವ ಮೂರ್ನಾಲ್ಕು ಯೂ ಟ್ಯೂಬ್ ಚಾನಲ್ಗಳಲ್ಲಿ ಟಿವಿ9 ಕನ್ನಡ ಕೂಡ ಒಂದು.
ಟಿವಿಯಂತೆಯೇ ಬ್ರೇಕಿಂಗ್ ಸುದ್ದಿ, ಸುದ್ದಿ ವಿಶ್ಲೇಷಣೆ, ನಾನಾ ವಿಚಾರಗಳ ಬಗ್ಗೆಗಿನ ಚರ್ಚೆ, ನೇರ ಪ್ರಸಾರದ ಮೂಲಕ ಕನ್ನಡಿಗರ ಮನೆ ಮಾತಾದ ಟಿವಿ9 ಯೂ ಟ್ಯೂಬ್ ರಾಜಕೀಯ, ಕ್ರೈಂ, ಸಿನಿಮಾ, ಕ್ರೀಡೆ, ಎಂಟರ್ಟೈನ್ ಮೆಂಟ್, ಜ್ಯೋತಿಷ್ಯ, ಆಧ್ಯಾತ್ಮಿಕ ಸೇರಿದಂತೆ ಹತ್ತಾರು ವಿಚಾರಗಳ ಬಗ್ಗೆ ವಿಡಿಯೋ ಮಾಡಿ ಬೆಳಕು ಚೆಲ್ಲುತ್ತಿದೆ. ಹೀಗಾಗಿ ಟಿವಿ9 ಯೂ ಟ್ಯೂಬ್ ನೋಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು ಆ ಮೂಲಕ ಚಂದಾದಾರರ ಸಂಖ್ಯೆಯೂ ಹೆಚ್ಚಿದೆ.
ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ 3ಲಕ್ಷ ವಿಡಿಯೋ ಅಪ್ ಲೋಡ್ ಮಾಡಿರುವ ಯೂ ಟ್ಯೂಬ್ ಅಂದ್ರೆ ಅದು ಟಿವಿ9 ಕನ್ನಡ. ಇದುವರೆಗೂ 1200 ಕೋಟಿ ವೀವ್ಸ್ ಪಡೆದಿರುವ ಟಿವಿ9 ಕನ್ನಡ ಯೂ ಟ್ಯೂಬ್ನಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಯ ವಿಡಿಯೋ ಅತೀ ಹೆಚ್ಚು ಅಂದ್ರೆ 9.1 ಮಿಲಿಯನ್ ವೀವ್ಸ್ ಪಡೆದಿದೆ. ಹಾಗೇಯೇ ಲೈವ್ ಸ್ಟ್ರೀಮ್ ನಲ್ಲಿ ಅಪ್ಪು ಅಗಲಿಕೆಯ ಲೈವ್ 10ಮಿಲಿಯನ್ ವೀವ್ಸ್ ಪಡೆದಿದೆ. ಇನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಕ್ಕಪಕ್ಕ ಕೂತು ಮಾತನಾಡುತ್ತಿರುವ ಸ್ವಾರ್ಟ್ಸ್ ಅತೀ ಹೆಚ್ಚು ವೀವ್ಸ್ ಪಡೆದಿದೆ.
ಕಳೆದ 13 ವರ್ಷಗಳಿಂದ ಸತತವಾಗಿ ನಂಬರ್ 1 ಆಗಿರುವ ಟಿವಿ9 ಯೂ ಟ್ಯೂಬ್ ಚಾನಲ್ ಜೊತೆಗೆ ಫೇಸ್ ಬುಕ್, ಇನ್ ಸ್ಟಾಗ್ರಾಂ, ಟಿಟ್ವರ್ ನಲ್ಲೂ ವಿಡಿಯೋ ಅಪ್ ಲೋಡ್ ಆಗುತ್ತಿದೆ. ಇದರ ಜತೆ ಟಿವಿ9 ವೆಬ್ ಸೈಟ್ ಕೂಡ ಕರ್ನಾಟಕದ ನಂಬರ್ ಒನ್ ಆಗಿ ಮುಂದುವರೆದಿದೆ. ವೆಬ್ಸೈಟ್ನಲ್ಲಿ ಸುದ್ದಿ, ಮಾಹಿತಿ, ಮನರಂಜನೆ, ಕ್ರೀಡೆ ಎಲ್ಲವೂ ಪ್ರತಿಕ್ಷಣದ ಅಪ್ಡೇಟ್ಸ್ ಕೊಡಲಾಗುತ್ತಿದೆ. ಈ ಮೂಲಕ ಟಿವಿ9 ಕನ್ನಡ ಡಿಜಿಟಲ್ ದುನಿಯಾದಲ್ಲೂ ಮುನ್ನುಗ್ಗಿದೆ.
ಒಟ್ಟಿನಲ್ಲಿ ಇದು ನಮ್ಮೊಬ್ಬರ ಸಾಧನೆ ಮಾತ್ರ ಅಲ್ಲವೇ ಇಲ್ಲ. ಇಡೀ ಕರುನಾಡೇ tv9 kannada ಮೇಲಿಟ್ಟಿರುವ ಅಪಾರ ನಂಬಿಕೆಯ ಸಂಕೇತ. ಉತ್ತಮ ಸಮಾಜಕ್ಕಾಗಿ ಅಂತ ಶುರುವಾದ ಕನ್ನಡ ನ್ಯೂಸ್ ಚಾನಲ್ 17 ವರ್ಷದಿಂದಲೂ ನಂ 1 ಆಗಿಯೇ ಮುನ್ನುಗ್ಗುತ್ತಿದೆ ಅಂದ್ರೆ ಅದಕ್ಕೆ ಇಂದಿಗೂ ಕನ್ನಡಿಗರು ಇಟ್ಟ ವಿಶ್ವಾಸವೇ ಕಾರಣ. ಅದೇ ರೀತಿ tv9 kannada Youtube ಚಾನೆಲ್ ಸಹ ಪ್ರತಿ ಕ್ಷಣದ ಪಾಲಿಟಿಕ್ಸ್, ಸಿನಿಮಾ, ಸ್ಪೋರ್ಟ್ಸ್ ಸೇರಿದಂತೆ ಎಲ್ಲಾ ಅಪ್ಡೇಟ್ಸ್ ಕೊಡುತ್ತಿದ್ದು, ಪ್ರತಿಯೊಬ್ಬರ ಮೊಬೈಲ್ಗಳಿಗೆ ಲಗ್ಗೆಯಿಡುತ್ತಿದೆ. ಈ ಓಟ ಇಲ್ಲಿಗೆ ನಿಲ್ಲುವುದಿಲ್ಲ. ಪ್ರತಿಕ್ಷಣ ನಿಮ್ಮೊಂದಿಗೆ ಉತ್ತಮ ಸಮಾಜಕ್ಕಾಗಿ ನಾವು ಸೋಷಿಯಲ್ ಮೀಡಿಯಾದಲ್ಲೂ ಇದ್ದೇ ಇರುತ್ತೇವೆ.. ಕನ್ನಡಿಗರಿಗೆ ಕ್ಷಣಕ್ಷಣದ ಸುದ್ದಿ, ಮಾಹಿತಿ ನೀಡುತ್ತಲೇ ಇರುತ್ತೇವೆ. ನಿಮ್ಮ ಕಷ್ಟ ಸುಖದಲ್ಲಿ ನಾವೂ ಭಾಗಿಯಾಗುತ್ತೇವೆ. ನಿಮ್ಮ ಬೆಂಬಲ ಇದೇ ರೀತಿ ನಿಮ್ಮ ಟಿವಿ9 ಕನ್ನಡ ಮೇಲಿರಲಿ.
ಒನ್ಸ್ ಎಗೈನ್ ಧನ್ಯವಾದ ಕರ್ನಾಟಕ.. ಧನ್ಯವಾದ ಕನ್ನಡಿಗರೇ..