Bomb Scare: ಶುಕ್ರವಾರದ ಕೋಲಾಹಲದ ನಂತರ ಇಂದು ನಗರದ ಶಾಲೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ
ಪೊಲೀಸರು ಶಾಲೆಗಳನ್ನು ಸ್ಯಾನಿಟೈಸ್ ಮಾಡಿ ಯಾವುದೇ ಅಪಾಯಕಾರಿ ವಸ್ತು ಇಲ್ಲದಿರುವುದನ್ನು ಖಚಿತಪಡಿಸಿ ಇವತ್ತು ಶಾಲೆಗಳನ್ನು ನಡೆಸಬಹುದೆಂದು ಹೇಳಿರುವುದು ಪೋಷಕರಲ್ಲಿ ಆತಂಕ ದೂರ ಮಾಡಿರುವುದು ಸತ್ಯ. ಆದರೆ, ಅವರಲ್ಲಿ ಭಾರೀ ಪ್ರಮಾಣದ ಆತಂಕ ಉಂಟು ಮಾಡಿದ ಮೇಲ್ ಗಳನ್ನು ಕಳಿಸಿದ ದುಷ್ಟರು ಯಾರೆನ್ನುವುದು ಪತ್ತೆಯಾಗಿಲ್ಲ. ಪೊಲೀಸರು ಆದಷ್ಟು ಬೇಗ ಅದನ್ನು ಪತ್ತೆಹಚ್ಚಬೇಕು.
ಬೆಂಗಳೂರು: ನಿನ್ನೆ ಬಾಂಬ್ ಬೆದರಿಕೆಯ ಮೇಲ್ ಗಳಿಂದಾಗಿ (bomb threat mails) ನಗರದ ಎಲ್ಲ ಶಾಲೆಗಳಲ್ಲಿ ಉಂಟಾದ ಆತಂಕ, ಗಾಬರಿ ಮತ್ತು ಭೀತಿಯನ್ನು ರಾಜ್ಯದ ಜನತೆ ನೋಡಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ ಬೆಂಗಳೂರಿನ 48 ಶಾಲೆಗಳಿಗೆ ಬಾಂಬ್ ಬೆದರಿಕೆಯ ಮೇಲ್ ಹೋಗಿತ್ತು. ಪೊಲೀಸರು ಬಾಂಬ್ ಪತ್ತೆ ದಳ (bomb detection squad) ಮತ್ತು ಡಾಗ್ ಸ್ಕ್ವ್ಯಾಡ್ ಗಳೊಂದಿಗೆ ಎಲ್ಲ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು ಯಾವುದೇ ಸ್ಫೋಟಕ ವಸ್ತು (explosive) ಎಲ್ಲೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ಎಂದಿನಂತೆ ನಡೆಸಬಹುದೆಂದು ಪೊಲೀಸರು ಶಾಲಾ ಆಡಳಿತ ಮಂಡಳಿಗಳಿಗೆ ತಿಳಿಸಿರುವುದರಿಂದ ಇವತ್ತು ಶಾಲೆಗಳನ್ನು ನಡೆಸಲಾಗುತ್ತಿದೆ. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ, ನಗರದ ಎರಡು ಶಾಲೆಗಳ ಬಗ್ಗೆ ವಿವರ ನೀಡಿದ್ದಾರೆ. ಸೆಂಟ್ ಜಾನ್ಸ್ ಹೈಸ್ಕೂಲ್ ವಾರದಲ್ಲಿ 5 ದಿನ ಮಾತ್ರ ಕಾರ್ಯ ನಿರ್ವಹಿಸುವುದರಿಂದ ಮಕ್ಕಳಾಗಲೀ ಪೋಷಕರಾಗಲೀ ಅಲ್ಲಿ ಕಾಣೋದಿಲ್ಲ. ಆದರೆ ಅದರ ಎದುರುಗಡೆ ಇರುವ ಸೆಂಟ್ ಜೋಸೆಫ್ಸ್ ಕಾನ್ವೆಂಟ್ ಸ್ಕೂಲ್ ಮಕ್ಕಳು ತಮ್ಮ ಪೋಷಕರೊಂದಿಗೆ ಬರುತ್ತಿರುವುದನ್ನು ನೋಡಬಹುದು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ