ಇಂದಿನಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ ಶುರು; ಕೈ ಬೀಸಿ ಕರೆಯುತ್ತಿದ್ದಾನೆ 800 ಕೆಜಿಯ ಕಡಲೆಕಾಯಿ ಬಸವ
Malleswaram KadaleKai parishe 2023: ಕಾಡುಮಲ್ಲೇಶ್ವರ ಗೆಳಯರ ಬಳಗ ಮುಜಾರಾಯಿ ಇಲಾಖೆ ಸಹಕಾರದಲ್ಲಿ ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗಿದೆ. ಬಸವನಗುಡಿ ಕಡಲೆ ಕಾಯಿ ಪರಿಕ್ಷೆಯಂತೆ ಇದು ಕೂಡ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. 800 ಕೆಜಿ ಕಡಲೆ ಕಾಯಿಗಳಿಂದ ಇಪ್ಪತ್ತು ಅಡಿ ಉದ್ದ ಹಾಗೂ ಇಪತ್ತು ಅಡಿ ಎತ್ತರದ ಬಸವ ಮೂರ್ತಿ ನಿರ್ಮಿಸಲಾಗಿದೆ.
ಬೆಂಗಳೂರು, ಡಿ.02: ಈ ವೀಕೆಂಡ್ನಲ್ಲಿ ನಡೆಯಲಿರುವ ಕಡಲೆಕಾಯಿ ಜಾತ್ರೆಗೆ ಇಡೀ ಬೆಂಗಳೂರು ಸಜ್ಜಾಗಿದೆ. ಇಂದಿನಿಂದ (ಡಿ.2) ಮೂರು ದಿನಗಳ ಕಾಲ ಕಾಲ ಕಾಡುಮಲ್ಲೇಶ್ವರ ದೇವಾಲಯದಲ್ಲಿ 7ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ (Malleswaram KadaleKai parishe 2023). ಕಾಡುಮಲ್ಲೇಶ್ವರ ಗೆಳಯರ ಬಳಗ ಮುಜಾರಾಯಿ ಇಲಾಖೆ ಸಹಕಾರದಲ್ಲಿ ಮಲ್ಲೇಶ್ವಂ 15ನೇ ಕ್ರಾಸ್ ನಲ್ಲಿರುವ ಶ್ರೀ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಹಮ್ಮಿಕೊಳ್ಳಲಾಗಿದೆ. ಕಾರ್ತಿಕ ಮಾಸದ ಶುಭಾ ಸಂದರ್ಭದಲ್ಲಿ ಪ್ರತಿವರ್ಷದಂತೆ ಮೂರು ದಿನಗಳ ಕಾಲ ಅಂದರೆ ಡಿ.02 ರಿಂದ ಡಿ.04ರ ವರಗೆ ಕಡಲೆಕಾಯಿ ಪರಿಷೆ ನಡೆಯಲಿದೆ.
ಬಸವನಗುಡಿಯಲ್ಲಿ ಮಾತ್ರವಲ್ಲದೇ ಮಲ್ಲೇಶ್ವರಂನಲ್ಲಿಯೂ ಕಡಲೆಕಾಯಿ ಪರಿಷೆ ನಡೆಯುತ್ತೆ. 800 ಕೆಜಿ ಕಡಲೆ ಕಾಯಿಗಳಿಂದ ಇಪ್ಪತ್ತು ಅಡಿ ಉದ್ದ ಹಾಗೂ ಇಪತ್ತು ಅಡಿ ಎತ್ತರದ ಬಸವ ಮೂರ್ತಿ ನಿರ್ಮಿಸಲಾಗಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದೆ. ನಾಳೆ ಬೆಳಗ್ಗೆ 11-30ಕ್ಕೆ ಸುಗಮ ಸಂಗೀತ ಕಾರ್ಯಕ್ರಮ ಇರಲಿದೆ. ಪಂಚಮ ಸಂಗೀತ ತಂಡ ಎಲ್.ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತವಿರಲಿದೆ. ಸಂಜೆ ಗಾನ ಗಂಧರ್ವ ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನಗಾನ, ಡಿಸೆಂಬರ್ 4 ಬೆಳಗ್ಗೆ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಇರಲಿದೆ. ಸಂಜೆ 6-30ಕ್ಕೆ ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್, ತಂಡದವರಿಂದ ಶಿವ ವೀಣಾ ಗಾನ ಸಂಗಮವಿರಲಿದೆ. ತಮಿಳುನಾಡು, ಆಂಧ್ರ, ತೆಲಂಗಾಣ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ರೈತರು ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾಗಲಿದ್ದಾರೆ. 200 ಮಳಿಗೆಗಳಲ್ಲಿ ರೈತರು ಬೆಳದ ಕಡಲೆಕಾಯಿ ಮತ್ತು ತರಕಾರಿ ಕರಕುಶಲ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಬಂದ ಜನರಿಗೆ ಪ್ರಸಾದ ರೂಪದಲ್ಲಿ ಕಡಲೆಕಾಯಿ ವಿತರಣೆ ಮಾಡಲಾಗುತ್ತೆ. ಸರಿ ಸುಮಾರು 8ಲಕ್ಷ ಜನರು ಪರಿಷೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ