ಮುಖ್ಯಮಂತ್ರಿ ಕುರ್ಚಿಯ ವ್ಯಾಮೋಹ ಯಡಿಯೂರಪ್ಪರನ್ನು ಯಾವತ್ತೂ ಬಿಡಲ್ಲ: ಬಸನಗೌಡ ಪಾಟೀಲ್ ಯತ್ನಾಳ್

ಸೋಮವಾರದಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದೆ ಮತ್ತು ಬಿಜೆಪಿ ಸಕಾಲದಲ್ಲಿ ಆರ್ ಅಶೋಕ ಅವರಿಗೆ ವಿರೋಧ ಪಕ್ಷ ನಾಯಕನ ಪಟ್ಟ ಕಟ್ಟಿ ಆಡಳಿತ ಪಕ್ಷದಿಂದ ಎದುರಾಗಬಹುದಾಗಿದ್ದ ಟೀಕೆಯಿಂದ ತಪ್ಪಿಸಿಕೊಂಡಿದೆ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಬಹಿರಂಗವಾಗಿ ಟೀಕಿಸುತ್ತಿರುವುದು ಪಕ್ಷದ ನಾಯಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ

ಮುಖ್ಯಮಂತ್ರಿ ಕುರ್ಚಿಯ ವ್ಯಾಮೋಹ ಯಡಿಯೂರಪ್ಪರನ್ನು ಯಾವತ್ತೂ ಬಿಡಲ್ಲ: ಬಸನಗೌಡ ಪಾಟೀಲ್ ಯತ್ನಾಳ್
|

Updated on: Dec 02, 2023 | 12:47 PM

ವಿಜಯಪುರ: ಸ್ಥಳೀಯ ಶಾಸಕ ಮತ್ತು ಬಿಎಸ್ ಯಡಿಯೂರಪ್ಪ (BS Yediyurappa) ಕುಟುಂಬ ಬದ್ಧವೈರಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಮಾಜಿ ಮುಖ್ಯಮಂತ್ರಿ ಮತ್ತು ಅವರ ಮಗ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡಿದ ಅವರು ಅಪ್ಪ ಮಗ ಸೇರಿ ಒಂದು ನಾಟಕ ಕಂಪನಿ ನಡೆಸುತ್ತಿದ್ದಾರೆ, ನಾಟಕ ಮಾಡೋದು ಬೇಡ ಅಂತ ಹಿಂದೆ ಹೇಳಿದಂತೆ ಈಗಲೂ ಹೇಳುವುದಾಗಿ ಯತ್ನಾಳ್ ಹೇಳಿದರು. ಯಡಿಯೂರಪ್ಪನವರಿಗೆ ಮಾಜಿ ಮುಖ್ಯಮಂತ್ರಿ ಅಂತ ಹೇಳಿಕೊಳ್ಳಲು ಹೇಸಿಗೆ ಅನಿಸುತ್ತದಂತೆ, ಹಾಗಾಗೇ, ನಿಕಟಪೂರ್ವ ಮುಖ್ಯಮಂತ್ರಿ ಅಂತ ಹೇಳಿಸಿಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿ ಬದಲು ನಿಕಟಪೂರ್ವ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ರಾಜ್ಯದ ಮಾಜಿ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪನವರೇ ಮೊದಲಿಗರು ಮತ್ತು ಕೊನೆಯವರು ಎಂದು ಯತ್ನಾಳ್ ಗೇಲಿ ಮಾಡಿದರು. ಮುಖ್ಯಮಂತ್ರಿ ಕುರ್ಚಿಯ ಮೇಲೆ ಅವರಿಗರು ವ್ಯಾಮೋಹಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಶಾಸಕ ಹೇಳಿದರು.

 

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us