ನನ್ನ ಭೇಟಿಗೆ ಬರೋದು ಬೇಡ ಅಂತ ವಿಜಯೇಂದ್ರನಿಗೆ ಹೇಳಿದ್ದೇನೆ: ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ಕಾರ್ಯಕರ್ತರನ್ನು ಆಧಾರಿತ ಪಕ್ಷ, ಕಾಂಗ್ರೆಸ್ ಪಕ್ಷದ ಹಾಗೆ ಸರ್ವಾಧಿಕಾರದ ಹೈಕಮಾಂಡ್ ಇಲ್ಲಿಲ್ಲ, ಬಿಜೆಪಿ ರಾಜ್ಯಧ್ಯಕ್ಷನನ್ನು ಅಯ್ಕೆ ಮಾಡುವಾಗ ಎಲ್ಲರ ಅಭಿಪ್ರಾಯ ಪಡೆಯಬೇಕಿತ್ತು ಎಂದು ಬಸನಗೌಡ ಯತ್ನಾಳ್ ಹೇಳುತ್ತಾರೆ. ಆದರೆ, ಅವರು ವಿಜಯೇಂದ್ರ ವಿರುದ್ಧ ಮಾಡುತ್ತಿರುವ ಆರೋಪಗಳು ರಾಜ್ಯದಲ್ಲಿ ಪಕ್ಷದ ಇಮೇಜಿಗೆ ಧಕ್ಕೆ ಉಂಟುಮಾಡುವ ಅಪಾಯವಂತೂ ಇದೆ.
ಬೆಂಗಳೂರು: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಮ್ಮ ರಾಜಕೀಯ ಬದುಕಿನಲ್ಲಿ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಹಾಗೂ ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅವರ ಮಗ ಬಿವೈ ವಿಜಯೇಂದ್ರರನ್ನು (BY Vijayendra) ಯಾವತ್ತೂ ಮನ್ನಿಸಲಾರೇನೋ? ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ವಿಜಯೇಂದ್ರರನ್ನು ತನ್ನ ಭೇಟಿಗೆ ಬರೋದು ಬೇಡ ಅಂತ ಸ್ಪಷ್ಟವಾಗಿ ಹೇಳಿದ್ದೇನೆಂದರು. ಅವರು ಹಿಂದೆ ಮಾಡಿದ ಆಟಗಳೆಲ್ಲ ತನಗೆ ಚೆನ್ನಾಗಿ ನೆನಪಿದೆ, ಪಕ್ಷದಿಂದ ತನ್ನ ಉಚ್ಚಾಟನೆಗೆ ಕಾರಣ ಯಾರಾಗಿದ್ದರು ಅನ್ನೋದು ಗೊತ್ತಿದೆ ಅಂತ ಹೇಳಿದ ಯತ್ನಾಳ್ ವಿಜಯಪುರ ನಗರಾಭಿವೃದ್ಧಿಗಾಗಿ ಯಡಿಯೂರಪ್ಪ ರೂ. 175 ಕೋಟಿ ಬಿಡುಗಡೆ ಮಾಡಿದ್ದಾಗ ವಿಜಯೇಂದ್ರ ಅದನ್ನು ತನ್ನ ಬಳಿ ಇಟ್ಟುಕೊಂಡಿದ್ದರು ಎಂಬ ಗಂಭೀರ ಆರೋಪ ಮಾಡಿದರು. ವಿಜಯೇಂದ್ರ ತನ್ನಲ್ಲಿಗೆ ಬಂದ್ರೆ ಏನೂ ಆಗೋದಿಲ್ಲ, ಅಂಥ ನಾಟಕಗಳು ಬೇಕಿಲ್ಲ ಎಂದ ಯತ್ನಾಳ್, ಅವರು ಬಂದರೆ ಮಾಧ್ಯಮ ಒಂದಷ್ಟು ಸರಕು ಸಿಗುತ್ತದೆ ಮತ್ತು ವಿಶ್ಲೇಷಣೆಗಳು ಶುರುವಾಗುತ್ತವೆ, ಅದೆಲ್ಲ ಬೇಡವೇ ಬೇಡ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್

