ವಿಡಿಯೋ: ಕೋಳಿ ಹುಂಜದ ಜನ್ಮದಿನ ಗ್ರ್ಯಾಂಡ್ಆಗಿ ಸೆಲಬ್ರೇಟ್ ಮಾಡಿದರು – 500 ಜನರಿಗೆ ಭೋಜನ ಹಾಕಿದರು!
Hen Birthday: ವಿಶಾಖಪಟ್ಟಣ ಜಿಲ್ಲೆಯ ಚೀಮಲಪಲ್ಲಿ ಗ್ರಾಮದ ನಿವಾಸಿಗಳಾದ ಕೋಟೇಶ್ವರರಾವ್ ಮತ್ತು ಕವಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 6 ವರ್ಷಗಳ ಹಿಂದೆ 5 ರೂಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿ ಪ್ರೀತಿಯಿಂದ ಸಾಕುತ್ತಿದ್ದರು. ಆ ಕೋಳಿ ಹುಂಜದ ಜನ್ಮದಿನವನ್ನು ಮೊನ್ನೆ ಗ್ರ್ಯಾಂಡ್ಆಗಿ ಸೆಲಬ್ರೇಟ್ ಮಾಡಿದರು
ಸಾಮಾನ್ಯವಾಗಿ ಜನ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳಾದ ನಾಯಿ, ಜಾನುವಾರುಗಳಿಗೂ ಹುಟ್ಟುಹಬ್ಬ, ಮದುವೆ, ಸೀಮಂತ, ಹಬ್ಬ ಹರಿದಿನಗಳಲ್ಲಿ ವಿಶೇಷ ಅಲಂಕಾರ ಮಾಡಿ ಸಂಭ್ರಮಿಸುವ ವಾಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕುಟುಂಬವೊಂದು ವೈವಿಧ್ಯಮಯವಾಗಿ ಯೋಚಿಸಿ, ವೈವಿಧ್ಯಮಯ ಹುಟ್ಟುಹಬ್ಬ ಆಚರಣೆ ಮಾಡಿತು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಿಶಾಖಪಟ್ಟಣ ಜಿಲ್ಲೆಯಲ್ಲಿ ಈ ಪ್ರಸಂಗ ನಡೆದಿದೆ.
ಜಿಲ್ಲೆಯ ಚೀಮಲಪಲ್ಲಿ ಗ್ರಾಮದ ನಿವಾಸಿಗಳಾದ ಕೋಟೇಶ್ವರರಾವ್ ಮತ್ತು ಕವಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 6 ವರ್ಷಗಳ ಹಿಂದೆ 5 ರೂಪಾಯಿ ಕೊಟ್ಟು ಕೋಳಿ ಮರಿಯೊಂದನ್ನು ಖರೀದಿಸಿ ಪ್ರೀತಿಯಿಂದ ಸಾಕುತ್ತಿದ್ದರು. ಎಲ್ಲಿಗೇ ಹೋದರೂ ಆ ಕೋಳಿ ಹುಂಜವನ್ನು ಹೊತ್ತುಕೊಂಡು ಹೋಗುತ್ತಿದ್ದರು. ಮನೆಯಲ್ಲಿನ ಇತರ ಕುಟುಂಬ ಸದಸ್ಯರಂತೆ, ತಮ್ಮ ಮಕ್ಕಳಂತೆ ಆ ಹುಂಜವನ್ನು ಬೆಳೆಸಿದ್ದಾರೆ.
ರಾತ್ರಿಯಾಗುತ್ತಿದ್ದಂತೆ ಆ ಕೋಳಿ ಹುಂಜ ಎಸಿ ರೂಮಿನಲ್ಲಿ ಮಲಗುತ್ತದೆ. ಕೋಳಿ ಹುಂಜದ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಸಹ ತೆರೆದರು. ಅವರು ತಮ್ಮ ಕೋಳಿ ಹುಂಜಕ್ಕೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕೋಳಿ ಹುಂಜದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಸುಮಾರು 500 ಮಂದಿಗೆ ಭಾರೀ ಭೋಜನ ಏರ್ಪಡಿಸಿದ್ದರು. ಇದೇ 20ರಂದು ಕೋಳಿ ಹುಂಜದಿಂದ ಕೇಕ್ ಕತ್ತರಿಸಲಾಯಿತು. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ