ಗಾಣಿಗ ಸಮಾವೇಶದಲ್ಲಿ ತೈಲೇಶ್ವರ ಸ್ವಾಮೀಜಿ ಕೂರುವವರೆಗೆ ಸಿಎಂ ಸಿದ್ದರಾಮಯ್ಯ ನಿಂತೇ ಇದ್ದರು!

ಗಾಣಿಗ ಸಮಾವೇಶದಲ್ಲಿ ತೈಲೇಶ್ವರ ಸ್ವಾಮೀಜಿ ಕೂರುವವರೆಗೆ ಸಿಎಂ ಸಿದ್ದರಾಮಯ್ಯ ನಿಂತೇ ಇದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2023 | 2:18 PM

ಗಾಣಿಗ ಸಂಘಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನೂತನ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು. ಸರ್ಕಾರದ ವತಿಯಿಂದ 50 ಲಕ್ಷ ರೂ. ಅನುದಾನವನ್ನು ಅವರು ಸಂಘಕ್ಕೆ ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರನ್ನು ಸತ್ಕರಿಸಲಾಯಿತು.

ಬೆಂಗಳೂರು: ನಗರದ ಆವಲಹಳ್ಳಿಯಲ್ಲಿ ಇಂದು ಆಯೋಜಿಸಲಾಗಿದ್ದ ಅಖಿಲ ಕರ್ನಾಟಕ ಗಾಣಿಗ ಸಮಾವೇಶದಲ್ಲಿ (All Karnataka Ganiga Convention) ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದರು. ಗಾಣಿಗ ಸಂಘಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನೂತನ ಕಟ್ಟಡದ (new building) ಉದ್ಘಾಟನೆಯನ್ನು ಮುಖ್ಯಮಂತ್ರಿ ನೆರವೇರಿಸಿದರು. ಸರ್ಕಾರದ ವತಿಯಿಂದ 50 ಲಕ್ಷ ರೂ. ಅನುದಾನವನ್ನು ಅವರು ಸಂಘಕ್ಕೆ ನೀಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರನ್ನು ಸತ್ಕರಿಸಲಾಯಿತು. ಮುಖ್ಯಮಂತ್ರಿ ವಿಚಾರವಾದಿ ಮತ್ತು ಮೂಢನಂಬಿಕೆಗಳನ್ನು ಅಸಡ್ಡೆ ಮಾಡುತ್ತಾರೆ. ಹಾಗಂತ ಅವರಿಗೆ ದೈವಭಕ್ತ ಅಲ್ಲ ಅಂತೇನೂ ಅಲ್ಲ. ಮಠಮಾನ್ಯ, ಮಠಾಧೀಶರ ಬಗ್ಗೆ ಅವರು ಅಪಾರ ಗೌರವಾದರ ಹೊಂದಿದ್ದಾರೆ. ವೇದಿಕೆಯ ಮೇಲೆ ನಡೆಯುವುದನ್ನು ಗಮನಿಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೈಲೇಶ್ವರ ಸ್ವಾಮೀಜಿಯವರು (Taileshwara Swamiji) ಕೂರುವವರೆಗೆ ಅವರು ಕೂರೋದಿಲ್ಲ, ಸ್ವಾಮೀಜಿ ಹೇಳಿದರೂ, ಮೊದಲು ನೀವು ಕೂತ್ಕೊಳ್ಳಿ ಅಂತ ವಿನಮ್ರರಾಗಿ ಹೇಳುತ್ತಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಸ್ವಾಮೀಜಿ ಅವರಲ್ಲದೆ ಕಾಂಗ್ರೆಸ್ ನಾಯಕ ವಿ ಆರ್ ಸುದರ್ಶನ್, ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಮತ್ತು ಹಲವು ಗಣ್ಯರು ಭಾಗವಹಿಸಿದ್ದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ