ನಕಲಿ ದಾಖಲಾತಿಗಳ ಸೃಷ್ಟಿಸಿ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂ ಸಾಲ ಎತ್ತಿದ ವಂಚಕರು, ಕ್ರಮ ಕೈಗೊಳ್ಳದ ಕುಂದಾಪುರ ಪೊಲೀಸರು!

ಕುಂದಾಪುರದಲ್ಲಿ ವಂಚಕರು ತಮ್ಮ ಬುದ್ದಿವಂತಿಕೆ ಉಪಯೋಗಿಸಿ ಎರಡು ಬ್ಯಾಂಕ್ಗಳಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದು, ರಾಜಾರೋಷವಾಗಿ ಐಷಾರಾಮಿ ಜೀವನ ನಡೆಸುತ್ತಾ ತಿರುಗಾಡಿಕೊಂಡಿದ್ದಾರೆ. ಆದರೆ ಇತ್ತ ಸಾಲ ಕೊಟ್ಟ ಬ್ಯಾಂಕಿನವರು ಮಾತ್ರ ಸಾಲ ಮರುಪಾವತಿಯಾಗದೆ ಕಂಗಾಲಾಗಿದ್ದು ನ್ಯಾಯಾಂಗದ ಮೊರೆ ಹೋಗಿದ್ದಾರೆ.

ನಕಲಿ ದಾಖಲಾತಿಗಳ ಸೃಷ್ಟಿಸಿ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂ ಸಾಲ ಎತ್ತಿದ ವಂಚಕರು, ಕ್ರಮ ಕೈಗೊಳ್ಳದ ಕುಂದಾಪುರ ಪೊಲೀಸರು!
ನಕಲಿ ದಾಖಲು ಸೃಷ್ಟಿಸಿ ಬ್ಯಾಂಕ್ ಗಳಲ್ಲಿ ಲಕ್ಷಾಂತರ ಸಾಲ ಎತ್ತಿದ ವಂಚಕರು
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on:Dec 02, 2023 | 2:03 PM

ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿ (fake documents) ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಮೋಸ ಮಾಡುತ್ತಿರುವ ಪ್ರಕರಣ (Fraudsters) ಕುಂದಾಪುರದಲ್ಲಿ ವರದಿಯಾಗಿದೆ. ಸಹಕಾರಿ ಬ್ಯಾಂಕ್ ನಲ್ಲಿ ಲೋನ್ ಪಡೆದು ಅದೇ ಬ್ಯಾಂಕಿನ ಸಾಲ ಚುಕ್ತಾ ದಾಖಲಾತಿಯನ್ನು ನಕಲಿಯಾಗಿ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್ (bank)ನಲ್ಲಿ ಮತ್ತೆ ಸಾಲ ಪಡೆದಿರುವ ಈ ತಂಡ ಕಳೆದ ಕೆಲವು ವರ್ಷಗಳಿಂದ ಕುಂದಾಪುರ ಭಾಗದಲ್ಲಿ ಸಕ್ರಿಯವಾಗಿದೆ. ಪೊಲೀಸ್ ಠಾಣೆಯಲ್ಲಿ (Kundapur police) ಈ ಕುರಿತು ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಹೌದು ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಬುದ್ದಿವಂತರ ಜಿಲ್ಲೆ ಎಂದು ಹೆಸರು ಪಡೆದ ಜಿಲ್ಲೆ. ಇಲ್ಲಿ ಅಪರಾಧವನ್ನು ಕೂಡ ಅತಿ ಬುದ್ಧಿವಂತಿಕೆ ಉಪಯೋಗಿಸಿ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಪಡೆಯುವ ಉದ್ದೇಶಕ್ಕೆ ಜಾಗವನ್ನ ಅಡಮಾನವಾಗಿರಿಸಿ ಸಾಲ ಪಡೆದ ಈ ತಂಡ. ಕೆಲವೇ ತಿಂಗಳುಗಳಲ್ಲಿ ಸಾಲ ಚುಕ್ತಾ ಆಗಿದೆ ಎನ್ನುವ ನಕಲಿ ದಾಖಲಾತಿಯನ್ನು ಸೃಷ್ಟಿಸಿ ಅದೇ ದಾಖಲಾತಿಗಳನ್ನು ಹಿಡಿದು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕೂಡ ಸಾಲ ಪಡೆದಿದೆ.

ಈ ಘಟನೆ ಬೆಳಕಿಗೆ ಬಂದಿರುವುದು ಕುಂದಾಪುರ ತಾಲೂಕಿನಲ್ಲಿ. ಕುಂದಾಪುರ ನಗರದಲ್ಲಿರುವ ಹೋಲಿ ರೋಸರಿ ಸಹಕಾರಿ ಬ್ಯಾಂಕ್ ನ ಸಾಲಗಾರರಾದ ಈ ತಂಡದವರು ಲಕ್ಷಾಂತರ ರೂಪಾಯಿ ವಂಚನೆ ನಡೆಸಿರುವುದು ದಾಖಲೆಗಳ ಮೂಲಕ ಸಾಬೀತಾಗಿದೆ. ಈ ಬಗ್ಗೆ ಎರಡು ಬಾರಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ರು ಕೂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಕೆಲಸ ಇದುವರೆಗೆ ಆಗಿಲ್ಲ ಎನ್ನುವುದು ಬ್ಯಾಂಕಿನವರ ದೂರು.

ಬೈಂದೂರು ತಾಲೂಕು ಆಲೂರು ಮೂಲದ ಶ್ರೀರಾಮಬಾಯಿರಿ ಎನ್ನುವರು 2015ರಲ್ಲಿ ಇದೇ ಹೋಲಿ ರೋಸರಿ ಬ್ಯಾಂಕ್ ನಿಂದ ಸರಿಸುಮಾರು 12 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ತಮ್ಮ ಜಾಗವನ್ನು ಅಡಮಾನವಿರಿಸಿ ಸಾಲ ಪಡೆದಿದ್ದ ಶ್ರೀರಾಮ ಬಾಯಿರಿ, ತಮ್ಮ ಕುಟುಂಬಸ್ಥರನ್ನೇ ಜಾಮೀನುದಾರರಾಗಿ ಮಾಡಿ ಸಾಲವನ್ನು ಕೂಡ ಮರು ಪಾವತಿ ಮಾಡದೆ, ಬ್ಯಾಂಕ್ ಹೆಸರಿನಲ್ಲಿ ಸಾಲ ಚುಕ್ತಾ ದಾಖಲೆಗಳನ್ನ ನಕಲಿಯಾಗಿ ಸೃಷ್ಟಿಸಿ ಎಸ್ ಬಿ ಐ ಬ್ಯಾಂಕ್ ನಲ್ಲಿ ಸುಮಾರು 52 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ!

ಇದನ್ನೂ ಓದಿ: ಜಗಳ ಬಗೆಹರಿಸಲು ಬಂದ ಪೊಲೀಸರ 122 ವಾಹನವನ್ನೇ ಚಲಾಯಿಸಿಕೊಂಡು ಪರಾರಿ:ಸಿನಿಮೀಯ ರೀತಿಯಲ್ಲಿ ಹಿಡಿದ ಖಾಕಿ

ಬ್ಯಾಂಕ್ ನವರು EC ಮೂಲಕ ಪರಿಶೀಲನೆ ನಡೆಸುವಾಗ ಆರೋಪಿಗಳ ಈ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ನಕಲಿ ದಾಖಲಾತಿ ಮತ್ತು ಬ್ಯಾಂಕ್ ಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಈ ಪ್ರಕರಣದ ಜಾಮೀನುದಾರರಾಗಿರುವ ಗುರುಪ್ರಸಾದ್ ಎನ್ನುವವನು ಕೂಡ ಇದೇ ಹೋಲಿಕೆಯ ಕುಕತ್ಯವೆಸಗಿ, ನಕಲಿ ಸೃಷ್ಟಿ ಮಾಡಿ ಕೆನರಾ ಬ್ಯಾಂಕ್ ನಲ್ಲಿ ಅದೇ ದಾಖಲಾತಿಗೆ ಸುಮಾರು 60 ಲಕ್ಷ ರೂಪಾಯಿ ಸಾಲ ಮಾಡಿರುವುದು ಬೆಳಕಿಗೆ ಬಂದಿದೆ. ಈ ಎರಡು ಪ್ರಕರಣಗಳ ಕುರಿತು ಪೊಲೀಸರಿಗೆ ದೂರು ನೀಡಿದರು ಕೂಡ ಇದುವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ದೂರುದಾರರ ಆಕ್ಷೇಪ.

ಉಡುಪಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:02 pm, Sat, 2 December 23

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ