ಬಿಇಓ ಅಧಿಕಾರಿಗಳ ಲಂಚಾವತಾರ ಅನಾವರಣ, ಇದು ಹೊನ್ನಾಳಿಯ ಶಿಕ್ಷಕ ಗೋಣೆಪ್ಪ ಅವರ ತಬರನ ಕಥೆ!

ಲಂಚ ಕೊಡಬೇಡಿ ಎಂದು ಮಕ್ಕಳಿಗೆ ನೀತಿ ಪಾಠ ಹೇಳಿಕೊಟ್ಟಿದ್ದೆ. ಇದೀಗ, ನನ್ನ ಹಣ ಪಡೆಯಲು ನಾನೇ ಹೊನ್ನಾಳಿ ಬಿಇ ಓ ಕಚೇರಿಯಲ್ಲಿ ಲಂಚದ ರೂಪದಲ್ಲಿ ಹಣ ಕೊಡಬೇಕಾಗಿದೆ. ಆದರೂ ನನ್ನ ಕೆಲಸವಾಗಲಿಲ್ಲ ಎಂದು ಹೊನ್ನಾಳಿಯ ಶಿಕ್ಷಕ ಗೋಣೆಪ್ಪ ಕಣ್ಣೀರಿಡುತ್ತಾರೆ.

ಬಿಇಓ ಅಧಿಕಾರಿಗಳ ಲಂಚಾವತಾರ ಅನಾವರಣ, ಇದು ಹೊನ್ನಾಳಿಯ ಶಿಕ್ಷಕ ಗೋಣೆಪ್ಪ ಅವರ ತಬರನ ಕಥೆ!
ಹೊನ್ನಾಳಿಯ ಶಿಕ್ಷಕ ಗೋಣೆಪ್ಪ ಅವರ ತಬರನ ಕಥೆ!
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Dec 02, 2023 | 11:15 AM

ಆ ಪುಣ್ಯಾತ್ಮ ಮೂರು ದಶಕಗಳ ಕಾಲ ಮಕ್ಕಳಿಗೆ ಪಾಠ ಮಾಡಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯ ನಿರ್ಮಿಸಲು ನಿರಂತರ ಸೇವೆ ಸಲ್ಲಿಸಿದ್ದಾರೆ. ನ್ಯಾಯ ನೀತಿ ಧರ್ಮದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಆ ಗುರು ಇಂದು ನಿವೃತ್ತಿ ವೇತನಕ್ಕಾಗಿ ಆರು ತಿಂಗಳಿಂದ ಅಲೆದಾಡುತ್ತಿದ್ದಾರೆ. ಕ್ಷೇತ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಲಂಚ (bribery) ಕೂಡಾ ಕೊಟ್ಟಿದ್ದಾರಂತೆ. ಆದ್ರೆ ನಿವೃತ್ತಿ ವೇತನ (retired teacher) ಬಿಡುಗಡೆ ಆಗುತ್ತಿಲ್ಲ. ಇಲ್ಲಿದೆ ನೋಡಿ ತಬರನ ಕಥೆಯನ್ನೆ ಹೋಲುವ ಸ್ಟೋರಿ. ಇದೇ ಸ್ಟೋರಿಯನ್ನ ಹೊಲುತ್ತದೆ ನೋಡಿ ಈ ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯ (Honnali) ಗೋಣೆಪ್ಪ ಶಿಕ್ಷಕನ ಕಥೆ (sad story).

ಪೂರ್ಣ ಚಂದ್ರ ತೇಜಸ್ವಿ ಅವರು ಬರೆದ ತಬರನ ಕಥೆ ಓದಿರ ಬೇಕು. ಇದೇ ಕಥೆ ಇಟ್ಟುಕೊಂಡು ಗಿರೀಶ್ ಕಾಸರವಳ್ಳಿ ತಬರನ ಕಥೆ ಅಂತಾ ಚಿತ್ರ ಕೂಡಾ ಮಾಡಿದ್ದಾರೆ. ಸರ್ಕಾರಿ ಉದ್ಯೋಗಿ ತಬರ ತನ್ನ ಪತ್ನಿಯ ಚಿಕಿತ್ಸೆಗೆ ದುಡ್ಡಿಲ್ಲದೆ ಪರದಾಡಿದ ಸ್ಥಿತಿ. ಸಕ್ಕರೆ ಕಾಯಿಲೆಯಿಂದ ಕಾಲು ಕೊಳೆತಾಗ ವೈದ್ಯರು ಕಾಲು ಕತ್ತರಿಸಬೇಕು ಅಂತಾರೆ. ಆದ್ರೆ ಹಣವಿಲ್ಲ. ಮಟನ್ ಅಂಗಡಿಗೆ ಹೋಗಿ ತನ್ನ ಪತ್ನಿಯ ಕಾಲು ಕಟ್ ಮಾಡು ಬದುಕುತ್ತಾಳೆ ಎನ್ನುತ್ತಾನೆ. ನಿಜಕ್ಕೂ ಕಣ್ಣಲ್ಲಿ ನೀರು ಬರುವ ದೃಶ್ಯವದು.

ನಿವೃತ್ತಿ ವೇತನ ಮತ್ತು ಉಪದಾನಗಳು ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ದೊರಕದ ಕಾರಣ ಶೀಘ್ರವೇ ಸಾಲ ಕೊಡಲು ಆಗಲಿಲ್ಲ. ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದು, ಗರ್ಭಿಣಿಯಾಗಿದ್ದಾರೆ. ಆದರೆ ಅವರ ಖರ್ಚಿಗೂ ನನ್ನ ಬಳಿ ಹಣವಿರಲಿಲ್ಲ. ನನ್ನ ನೋವನ್ನು ಯಾರಿಗೆ ಹೇಳಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆ ಶಿಕ್ಷಕ 14 ವರ್ಷದಿಂದ ಬೀದಿ ಪಾಲಾಗಿದ್ದಾರೆ, ಶಾಲಾ ಆಡಳಿತ ಮಂಡಳಿ ಅವರನ್ನು ಇನ್ನೂ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ, ಏನಿದರ ವೃತ್ತಾಂತ

ಹೊನ್ನಾಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ವಿನಾಕಾರಣ ಅನ್ಯಾಯಕ್ಕೊಳಗಾಗಿದ್ದೇನೆ. ನಾನು ಸ. ಹಿ. ಪ್ರಾಶಾಲೆ ಗೊಲ್ಲರಹಳ್ಳಿಯಲ್ಲಿ ಶಿಕ್ಷಕರಾಗಿ ತೃಪ್ತಿಕರವಾಗಿ ಕರ್ತವ್ಯ ನಿರ್ವಹಿಸಿ, ಸದರಿ ಗ್ರಾಮದಲ್ಲಿ ಮತ್ತು ತಮ್ಮ ಇಲಾಖೆಯಲ್ಲಿಯೂ ಉತ್ತಮ ಹೆಸರು ಪಡೆದಿದ್ದು, ಇದೇ ಜೂನ್ 30ಕ್ಕೆ ನಿವೃತ್ತಿ ಹೊಂದಿರುತ್ತೇನೆ. ನನ್ನ ಅವಧಿಯಲ್ಲಿ ನಿವೃತ್ತರಾದ ಹಲವರು ಹೆಚ್ಚಿನ ಹಣ ಕೊಟ್ಟ ಕಾರಣ ಅವರಿಗೆ ಬೇಗ ನಿವೃತ್ತಿ ಹಣ ಸಿಕ್ಕಿತ್ತು ಎಂದು ಹೊನ್ನಾಳಿಯ ಶಿಕ್ಷಕ ಗೋಣೆಪ್ಪ ಕಣ್ಣೀರಿಡುತ್ತಾರೆ.

ನಿವೃತ್ತಿಯ ನಂತರ ಸರಕಾರ/ಇಲಾಖೆಯಿಂದ ನಿವೃತ್ತಿ ವೇತನ ಮತ್ತು ಉಪದಾನಗಳು ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಮೂರು ತಿಂಗಳು ಅಥವಾ, ಆರು ತಿಂಗಳಿನ ಒಳಗೆ ಸೂಕ್ತ ರೀತಿಯಲ್ಲಿ ಹಾಗೂ ನಿಗದಿತ ಅವಧಿಯಲ್ಲಿ ದೊರಕಿಸಿಕೊಡಬೇಕಾಗಿದೆ.ಆದರೆ ನಿವೃತ್ತಿ ವೇತನ ಮತ್ತು ಉಪದಾನಗಳಿಗೆ ಸಂಬಂಧಿಸಿದ ಕಡತಗಳನ್ನು ಸಂಬಂಧಪಟ್ಟ ಪ್ರಾಧಿಕಾರ/ಕಛೇರಿಗೆ ಕಳುಹಿಸಿಕೊಡುವಲ್ಲಿ ಬಿಇಒ ಹಾಗೂ ಕಛೇರಿ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯ, ಅನಗತ್ಯ ವಿಳಂಬ ಹಾಗೂ ಕರ್ತವ್ಯಲೋಪದಿಂದ ಸುಮಾರು ಆರು ತಿಂಗಳು ಕಳೆದರೂ ಯಾವುದೇ ನಿವೃತ್ತಿ ವೇತನ, ಉಪದಾನ ಮತ್ತು ಇತರೆ ಯಾವುದೇ ಸೌಲಭ್ಯಗಳು ದೊರಕಲಿಲ್ಲ ಎಂದಿದ್ದಾರೆ.

Also read: ಹಾಸನದಲ್ಲಿ ಹೀಗೊಬ್ಬ ಅಧಿಕಾರಿ -ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ‌ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ!

ಸರಕಾರಿ ವೇತನವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ನಾನು ಕಷ್ಟಕ್ಕೊಳಗಾಗಿದ್ದೇನೆ.ನಿವೃತ್ತಿಯ ನಂತರ ಬರುವ ಹಣವನ್ನು ನಂಬಿಕೊಂಡು ಬಡ್ಡಿಯಂತೆ ಕೈಸಾಲ ಪಡೆದು ತಮ್ಮ ಮಕ್ಕಳ ಮದುವೆ ಮಾಡಿದ್ದು,. ಪ್ರತಿ ತಿಂಗಳು ಸುಮಾರು ೨೫ ಸಾವಿರ ರೂ. ಬಡ್ಡಿಯನ್ನು ಕಟ್ಟುತ್ತಿದ್ದೇನೆ. ಒಂದು ಹೊತ್ತಿನ ಊಟಕ್ಕೂ ತೊಂದರೆಯುಂಟಾಗಿ ಸಂಸಾರ ನಡೆಸುವುದೇ ಕಷ್ಟಕರವಾಗಿದೆ.

ನಿವೃತ್ತಿ ವೇತನವಿಲ್ಲದೇ ಆರು ತಿಂಗಳುಗಳ ಕಾಲ ಮನೆ ಬಾಡಿಗೆ ಕಟ್ಟದೇ ಇದ್ದುದರಿಂದ ಮನೆ ಮಾಲೀಕರು ಕುಟುಂಬವನ್ನು ಹೊರಹಾಕಿ ಗಲಾಟೆ ಮಾಡಿದ್ದ ಕಾರಣ ಸ್ವಂತ ಊರು ಜಗಳೂರಿಗೆ ಕಣ್ಣೀರು ಹಾಕಿಕೊಂಡು ಹೋಗಿದ್ದೇವೆ ಎನ್ನುತ್ತಾರೆ. ಸಕಾಲಕ್ಕೆ ನಿವೃತ್ತಿ ವೇತನ ನೀಡದಿದ್ದರೆ ಬಿಇಓ ಕಚೇರಿಯ ಮುಂದೆ ಧರಣಿ ಕುಳಿತುಕೊಳ್ಳಲು ಶಿಕ್ಷಕ ನಿರ್ಧರಿಸಿದ್ದಾರೆ. ಅಷ್ಟರಲ್ಲಿ ಜಿಲ್ಲಾಡಳಿತ ಎಚ್ಚತ್ತುಕೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.