ಆ ಶಿಕ್ಷಕ 14 ವರ್ಷದಿಂದ ಬೀದಿ ಪಾಲಾಗಿದ್ದಾರೆ, ಶಾಲಾ ಆಡಳಿತ ಮಂಡಳಿ ಅವರನ್ನು ಇನ್ನೂ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ, ಏನಿದರ ವೃತ್ತಾಂತ
ಬುದ್ಧಿವಂತರ ಜಿಲ್ಲೆ ಉಡುಪಿಯ ಬ್ರಹ್ಮಾವರ ತಾಲೂಕಿನ ಶಿಕ್ಷಕರೊಬ್ಬರು, ತಮ್ಮದಲ್ಲದ ತಪ್ಪಿಗೆ 14 ವರ್ಷಗಳಿಂದ ಹೊಟ್ಟೆಪಾಡಿಗಾಗಿ ಟೀ ಕ್ಯಾಂಟಿನ್ ನಡೆಸುತ್ತಿದ್ದಾರೆ. ಇನ್ನಾದರೂ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಶಾಲೆಯ ಆಡಳಿತ ಮಂಡಳಿಯಿಂದ ಬರಬೇಕಾದ ಪಿಂಚಣಿ ಹಣ, ಬಾಕಿ ಸಂಬಳವನ್ನು ನೀಡುತ್ತದೆಯೋ ಕಾದುನೋಡಬೇಕಿದೆ.
ಶಿಕ್ಷಕನೋರ್ವ ತಾನು ಮಾಡದ ತಪ್ಪಿನಿಂದಾಗಿ ಕಳೆದ 14 ವರ್ಷಗಳಿಂದ ಬೀದಿ ಪಾಲಾಗಿರುವ ಪ್ರಕರಣ ಇದು. ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ (Udupi, Brahmavara) ಈ ಶಿಕ್ಷಕ ಹೊಟ್ಟೆಪಾಡಿಗಾಗಿ ಸದ್ಯ ಟೀ ಕ್ಯಾಂಟಿನ್ (canteen) ನಡೆಸುತ್ತಿದ್ದಾರೆ. ಅತ್ತ ತನಿಖೆಯನ್ನು ನಡೆಸದೆ ಇತ್ತ ಸಂಬಳ- ಪಿಂಚಣಿಯನ್ನು(salary) ನೀಡದೆ ಶಾಲಾ ಆಡಳಿತ ಮಂಡಳಿ ಈ ಶಿಕ್ಷಕನನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಹೌದು ಇದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಓ ಎಸ್ ಸಿ ಇ ಎಸ್ ವಿದ್ಯಾಸಂಸ್ಥೆಯ ಶಿಕ್ಷಕನೋರ್ವನ ಕಥೆ. ಇದೇ ಶಿಕ್ಷಣ ಸಂಸ್ಥೆಯಲ್ಲಿ ಸುಮಾರು 14 ವರ್ಷಗಳ ಕಾಲ ಅಧ್ಯಾಪಕರಾಗಿ ಏಳು ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವಿಸಲ್ಲಿಸಿದ ವಿಲ್ಸನ್ ಡಿಸೋಜಾ ಅಕ್ಷರಶಃ ಈಗ ಬೀದಿಗೆ ಬಿದ್ದಿದ್ದಾರೆ (inhuman).
ಯಾವುದೋ ಒಂದು ವೈಯಕ್ತಿಕ ದೂರಿನ ಹಿನ್ನೆಲೆಯಲ್ಲಿ ಸಂತ್ರಸ್ತ ವಿಲ್ಸನ್ ಅವರನ್ನ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗುತ್ತದೆ. ಅವರಿವರ ಸಹಕಾರದ ಮೇಲೆ ಬಿಡುಗಡೆಯಾಗ ಬಂದ ವಿಲ್ಸನ್ ಅವರ ಮೇಲೆ ತನಿಖೆ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸುತ್ತದೆ. ಆದರೆ ಶಿಕ್ಷಣ ಸಂಸ್ಥೆ ಮಾತ್ರ ಯಾವುದೇ ತನಿಖೆ ವಿಚಾರಣೆಯನ್ನು ನಡೆಸದೆ ಶಿಕ್ಷಕನನ್ನ ಅಮಾನತು ಮಾಡಿ ಬೀದಿಗೆ ತಳ್ಳಿದೆ.
ಶಾಲೆಗೆ ಉತ್ತಮ ಹೆಸರು ಬರಬೇಕು ಎನ್ನುವ ನಿಟ್ಟಿನಲ್ಲಿ ಇಲಾಖೆಯ ವಿವಿಧ ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನ ಶಾಲೆಯಲ್ಲಿ ವಿಲ್ಸನ್ ತಮ್ಮ ಅವಧಿಯಲ್ಲಿ ಆಯೋಜಿಸುತ್ತಾ ಬಂದಿದ್ದರು. ಸಾಲ ಸೋಲ ಮಾಡಿ ತಂದು ಶಾಲೆಯ ಅಭಿವೃದ್ಧಿಗಾಗಿ ದುಡಿದ ಶಿಕ್ಷಕನಿಗೆ ಶಾಲೆಯ ಆಡಳಿತ ಮಂಡಳಿ ಒಂದು ಚೂರು ಕನಿಕರ ತೋರದೆ ಶಾಲೆಯಿಂದ ಹೊರ ತಬ್ಬಿದೆ. ಇತ್ತ ಶಿಕ್ಷಣ ಇಲಾಖೆಯೂ ಕೂಡ ಯಾವುದೇ ತನಿಖೆಯನ್ನು ಕೂಡ ನಡೆಸದೆ ಶಿಕ್ಷಕನ ಪರಿಸ್ಥಿತಿ ಹೇಗಿದೆ ಅನ್ನೋದನ್ನ ವಿಚಾರಿಸದೆ ಕಣ್ಣು ಮುಚ್ಚಿ ಕುಳಿತಿದೆ.
ಇದನ್ನೂ ಓದಿ: ಗಡುವು ಮುಗಿದರೂ ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ
ಯಾವುದೇ ಸರಕಾರಿ ಶಿಕ್ಷಕನ ಮೇಲೆ ತನಿಖೆ ಆದೇಶ ಬಂದಲ್ಲಿ ಆರು ತಿಂಗಳ ಅವಧಿಯಲ್ಲಿ ತನಿಖೆ ನಡೆಸಿ ವರದಿ ಒಪ್ಪಿಸಬೇಕು ಎನ್ನುವ ನಿಯಮವಿದೆ. ಆದರೆ ವಿಲ್ಸನ್ ವಿಚಾರದಲ್ಲಿ ಈ ನಿಯಮ ಪಾಲನೆಯಾಗಿಲ್ಲ. ಸದ್ಯ ವಯೋ ನಿವೃತ್ತಿಯಲ್ಲಿರುವ ಶಿಕ್ಷಕ ವಿಲ್ಸನ್ ಡಿಸೋಜಾ ಅಮಾನತು ಶಿಕ್ಷೆಯ ಬಳಿಕ ಕೂಲಿ ಕೆಲಸವನ್ನು ಕೂಡ ಮಾಡಿ ಕುಟುಂಬದ ಪೋಷಣೆ ಮಾಡಿದ್ದರು.
ವಿಲ್ಸನ್ ಡಿಸೋಜ ತಾವು ಮಾಡಿದ ತಪ್ಪಿಗಾಗಿ ಕಳೆದ ಹಲವು ವರ್ಷಗಳಿಂದ ತಮ್ಮ ಜೀವನ ನಿರ್ವಹಣೆಗಾಗಿ ಸಿಕ್ಕಿದ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ. ಇನ್ನಾದರೂ ಶಿಕ್ಷಣ ಇಲಾಖೆ ಮಧ್ಯ ಪ್ರವೇಶಿಸಿ ಶಾಲೆಯ ಆಡಳಿತ ಮಂಡಳಿಯಿಂದ ಬರಬೇಕಾದ ಪಿಂಚಣಿ ಹಣ ಮತ್ತು ಸಂಬಳವನ್ನು ನೀಡುತ್ತದೆಯೋ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ