ಹೈಕಮಾಂಡ್ ಹೈದರಾಬಾದ್ ಹೋಗಲು ತಿಳಿಸಿದೆ, ಅಲ್ಲಿಗೆ ಹೋಗುತ್ತೇನೆ: ಡಿಕೆ ಶಿವಕುಮಾರ್, ಡಿಸಿಎಂ

ಹೈಕಮಾಂಡ್ ಹೈದರಾಬಾದ್ ಹೋಗಲು ತಿಳಿಸಿದೆ, ಅಲ್ಲಿಗೆ ಹೋಗುತ್ತೇನೆ: ಡಿಕೆ ಶಿವಕುಮಾರ್, ಡಿಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 02, 2023 | 1:36 PM

ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಅಂತ ಕರೆಸಿಕೊಳ್ಳುತ್ತಾರೆ. ಹಿಂದೆ ಅವರು ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಬೇಟೆಯಾಡುವುದು ತಪ್ಪಿಸಲು ಬೆಂಗಳೂರಿಗೆ ಕರೆತಂದು ರೆಸಾರ್ಟ್ ಗಳಲ್ಲಿ ಇರಿಸಿದ್ದರು. ತೆಲಂಗಾಣದಲ್ಲಿ ಬಿಆರ್ ಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ತಲೆದೋರುವ ಸಾಧ್ಯತೆ ಇರೋದ್ರಿಂದ ಅವರನ್ನು ಹೈದರಾಬಾದ್ ಗೆ ಕಳಿಸಲಾಗುತ್ತಿದೆ.

ಬೆಂಗಳೂರು: ಮೊನ್ನೆ ಕೊನೆಗೊಂಡ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕಾಂಗ್ರೆಸ್ ನಾಯಕರನ್ನು (Congress leaders) ಬೇರೆ ಪಕ್ಷಗಳು ಪೋಚ್ ಮಾಡುವುದು ತಪ್ಪಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಬೆಂಗಳೂರುಗೆ ಕರೆತಂದು ರೆಸಾರ್ಟ್ ಗಳಲ್ಲಿ (resorts) ತಂಗಿಸಲಿರುವರೇ? ಮಾಧ್ಯಮ ಪ್ರತಿನಿಧಿಗಳು ಈ ಪ್ರಶ್ನೆ ಕೇಳಿದಾಗ ಶಿವಕುಮಾರ್ ಸ್ಪಷ್ಟ ಉತ್ತರ ನೀಡಲಿಲ್ಲ. ತಮ್ಮ ಕ್ಷೇತ್ರದ ಜನರೊಂದಿಗೆ ಬಹಳ ದಿನಗಳಿಂದ ಮಾತಾಡಿರದ ಕಾರಣ ಜನಸಂಪರ್ಕ ಇಟ್ಟುಕೊಂಡಿದ್ದು ಅಲ್ಲಿಗೆ ಹೋಗುತ್ತಿದ್ದ್ದೇನೆ ಅಂತ ಅವರು ಹೇಳಿದರು. ಅದಾದ ಮೇಲೆ 10-ದಿನ ಬೆಳಗಾವಿ ಅಧಿವೇಶನ ನಡೆಯಲಿದೆ ಎಂದು ಹೇಳಿದ ಶಿವಕುಮಾರ್, ಹೈದರಾಬಾದ್ ಗೆ ಹೋಗಬೇಕಿದೆ ಅಂತ ತಿಳಿಸಿದರು. ಪಕ್ಷದ ಹೈಕಮಾಂಡ್ ನೀಡುವ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ, ಅದಕ್ಕಾಗಿ ತೆಲಂಗಾಣಕ್ಕೆ ಹೋಗುವುದಾಗಿ ಹೇಳಿದರು.

 

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ