IND vs AUS 4th T20I: ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ ನೋಡಿ

IND vs AUS 4th T20I: ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ ನೋಡಿ

Vinay Bhat
|

Updated on: Dec 02, 2023 | 8:01 AM

Rinku Singh Reverse-Sweep Six 4th T20I: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ರಿಂಕು ಸಿಂಗ್ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಇದರಲ್ಲಿ ರಿವರ್ಸ್ ಸ್ವೀಪ್ ಮೂಲಕ ರಿಂಕು ಸಿಡಿಸಿದ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲೂ ರಿಂಕು ಸಿಂಗ್ (Rinku Singh) ಆರ್ಭಟ ಮುಂದುವರೆಯಿತು. ಪ್ರತಿ ಪಂದ್ಯದಲ್ಲಿ ಅಬ್ಬರಿಸುತ್ತಿರುವ ರಿಂಕು ಶುಕ್ರವಾರ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 29 ಎಸೆತಗಳಲ್ಲಿ 46 ರನ್ ಗಳಿಸುವ ಮೂಲಕ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬ್ಯಾಟಿಂಗ್ ಮಾಡಲು ಕಷ್ಟವಾದ ಪಿಚ್​ನಲ್ಲಿ ಭಾರತದ ಮೊತ್ತವನ್ನು 20 ಓವರ್‌ಗಳಲ್ಲಿ 174ಕ್ಕೆ ತಂದಿಟ್ಟರು. ರಿಂಕು ಬ್ಯಾಟ್​ನಿಂದ ನಾಲ್ಕು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಬಂದವು. ಅದರಲ್ಲೂ ರಿಂಕು ಸಿಡಿಸಿದ ಒಂದು ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತು. 12ನೇ ಓವರ್‌ನ ಮೂರನೇ ಎಸೆತದಲ್ಲಿ ರಿಂಕು ರಿವರ್ಸ್ ಸ್ವೀಪ್ ಮೂಲಕ 88-ಮೀಟರ್ ಸಿಕ್ಸರ್ ಸಿಡಿಸಿದರು. ಇದನ್ನು ಕಂಡು ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಅಚ್ಚರಿಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ