ಲಿಯಾಮ್ ಲಿವಿಂಗ್ಸ್ಟೋನ್ ಕಳಪೆಯಾಟಕ್ಕೆ ಬೆಲೆ ತೆತ್ತ ಫಿನಿಕ್ಸ್ ಪಡೆ
Birmingham Phoenix vs Trent Rockets: ಈ ಪಂದ್ಯದಲ್ಲಿ ಟಾಸ್ ಗೆದ್ದ ಬರ್ಮಿಂಗ್ಹ್ಯಾಮ್ ಫಿನಿಕ್ಸ್ ತಂಡದ ನಾಯಕ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬರ್ಮಿಂಗ್ಹ್ಯಾಮ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ವಿಲ್ ಸ್ಮೀಡ್ (1) ಹಾಗೂ ಬೆನ್ ಡಕೆಟ್ (0) ಬೇಗನೆ ಔಟಾದರು. ಆ ಬಳಿಕ ಬಂದ ಜೋ ಕ್ಲಾರ್ಕ್ 29 ರನ್ಗಳ ಕೊಡುಗೆ ನೀಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಲಿಯಾಮ್ ಲಿವಿಂಗ್ಸ್ಟೋನ್ ಇದೀಗ ದಿ ಹಂಡ್ರೆಡ್ ಲೀಗ್ನಲ್ಲೂ ಕಳಪೆಯಾಟ ಮುಂದುವರೆಸಿದ್ದಾರೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಟೂರ್ನಿಯ 4ನೇ ಪಂದ್ಯದಲ್ಲಿ ಬರ್ಮಿಂಗ್ಹ್ಯಾಮ್ ಫಿನಿಕ್ಸ್ ಹಾಗೂ ಟ್ರೆಂಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬರ್ಮಿಂಗ್ಹ್ಯಾಮ್ ಫಿನಿಕ್ಸ್ ತಂಡದ ನಾಯಕ ಲಿಯಾಮ್ ಲಿವಿಂಗ್ಸ್ಟೋನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಬರ್ಮಿಂಗ್ಹ್ಯಾಮ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ವಿಲ್ ಸ್ಮೀಡ್ (1) ಹಾಗೂ ಬೆನ್ ಡಕೆಟ್ (0) ಬೇಗನೆ ಔಟಾದರು. ಆ ಬಳಿಕ ಬಂದ ಜೋ ಕ್ಲಾರ್ಕ್ 29 ರನ್ಗಳ ಕೊಡುಗೆ ನೀಡಿದರು.
ಇನ್ನು ತಂಡದ ಅನುಭವಿ ದಾಂಡಿಗನಾಗಿ ಕಣಕ್ಕಿಳಿದ ಲಿಯಾಮ್ ಲಿವಿಂಗ್ಸ್ಟೋನ್ ರನ್ಗಳಿಸಲು ಪರದಾಡಿದರು. ಪರಿಣಾಮ ನಿರ್ಣಾಯಕ ಹಂತದಲ್ಲಿ 30 ಎ ಎಸೆತಗಳನ್ನು ಎದುರಿಸಿದ ಲಿಯಾಮ್ ಕೇವಲ 39 ರನ್ ಕಲೆಹಾಕಿದರು. ಈ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಬರ್ಮಿಂಗ್ಹ್ಯಾಮ್ ಫಿನಿಕ್ಸ್ ತಂಡವು 100 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 122 ರನ್ಗಳಿಸಲಷ್ಟೇ ಶಕ್ತರಾದರು.
123 ರನ್ಗಳ ಗುರಿ ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಟಾಮ್ ಬ್ಯಾಂಟನ್ (43) ಸ್ಫೋಟಕ ಆರಂಭ ಒದಗಿಸಿದರು. ಇನ್ನು ರೆಹಾನ್ ಅಹ್ಮದ್ 25 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಟ್ರೆಂಟ್ ರಾಕೆಟ್ಸ್ ತಂಡ 78 ಎಸೆತಗಳಲ್ಲಿ 123 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
