Video: ಸಂಚಾರಕ್ಕೆ ಅಡ್ಡಿಯಾದ ಗುಂಡಿಗಳು: ಸಂಚಾರಿ ಪೊಲೀಸ್​ರ ಕೆಲಸಕ್ಕೆ ಎಲ್ಲರ ಮೆಚ್ಚುಗೆ

Edited By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2023 | 8:11 PM

ಮೈಕೋ ಲೇಔಟ್ ಗಣೇಶ ಟೆಂಪಲ್ ಜಂಕ್ಷನ್ ಬಳಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಇದನ್ನು ಗಮನಿಸಿದ ಜಯನಗರ ಸಂಚಾರಿ ಪೊಲೀಸ್ ಸಿಬ್ಬಂದಿಗಳು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ವತಃ ತಾವೇ ಟ್ರಾಕ್ಟರ್​ನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ್ದಾರೆ.

ಬೆಂಗಳೂರು, ಸೆ.06: ಸಂಚಾರಕ್ಕೆ ಅಡ್ಡಿಯಾದ ಗುಂಡಿ ಮುಚ್ಚಲು ಸ್ವತಃ ಸಂಚಾರಿ ಪೊಲೀಸ್ (Traffic Police)​ ಫೀಲ್ಡಿಗಿಳಿದು ಗುಂಡಿ ಮುಚ್ಚಿದ್ದಾರೆ. ಹೌದು, ಮೈಕೋ ಲೇಔಟ್ ಗಣೇಶ ಟೆಂಪಲ್ ಜಂಕ್ಷನ್ ಬಳಿ ರಸ್ತೆಯಲ್ಲಿ ಗುಂಡಿ ಬಿದ್ದಿತ್ತು. ಇದನ್ನು ಗಮನಿಸಿದ ಜಯನಗರ ಸಂಚಾರಿ ಪೊಲೀಸ್ ಸಿಬ್ಬಂದಿಗಳು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಸ್ವತಃ ತಾವೇ ಟ್ರಾಕ್ಟರ್​ನಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ್ದಾರೆ. ಇದೀಗ ರಸ್ತೆ ಗುಂಡಿ‌ ಮುಚ್ಚುವ ಕೆಲಸಕ್ಕೆ ಹಲವೆಡೆ ಶ್ಲಾಘನೆ ವ್ಯಕ್ತವಾಗಿದೆ. ಸ್ವತಃ ಟ್ರಾಕ್ಟರ್​ನಲ್ಲಿ ಮಣ್ಣು ತಂದು ಸುರಿದು ಸುಗಮ‌ ಸಂಚಾರಕ್ಕೆ ಅನುವು ಮಾಡಿಕೊಟ್ಟ ಜಯನಗರ ಸಂಚಾರ ಪೊಲೀಸ್ ಸಿಬ್ಬಂಧಿಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More