ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಂಧನ
ಜು.11 ರಂದು ನಗರದ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿದ್ದ ಹಿನ್ನಲೆ ಬಾಣಸವಾಡಿ ಸಂಚಾರಿ ಠಾಣೆಯ ಪೇದೆ ಉಮೇಶ್ ಎಂಬುವವರು ಕ್ಲಾಂಪ್ ಹಾಕಿದ್ದರು. ಈ ಕಾರಣ ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಜು.11 ರಂದು ನಗರದ ಬಾಣಸವಾಡಿ(Banaswadi) ಠಾಣಾ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿದ್ದ ಹಿನ್ನಲೆ ಬಾಣಸವಾಡಿ ಸಂಚಾರಿ ಠಾಣೆಯ ಪೇದೆ ಉಮೇಶ್ ಎಂಬುವವರು ಕ್ಲಾಂಪ್ ಹಾಕಿದ್ದರು. ಈ ಕಾರಣಕ್ಕೆ ನಡುರಸ್ತೆಯಲ್ಲಿಯೇ ಕರ್ತವ್ಯನಿರತ ಪೊಲೀಸ್(Police) ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಕೃತ್ಯವೆಸಗಿದ್ದ ಆರೋಪಿಗಳನ್ನ ಬಂಧಿಸಿ, ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ. ಸುಲೇಮಾನ್ ಬಂಧಿತ ಆರೋಪಿ. ಇನ್ನು ಹಲ್ಲೆಗೊಳಗಾದ ಸಂಚಾರಿ ಪೊಲೀಸ್ ಸಿಬ್ಬಂದಿ ನಿನ್ನೆ ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನ ಬಂಧಿಸಲಾಗಿದ್ದು, ಘಟನೆ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಅವರು ಟ್ಟೀಟ್ ಮಾಡಿದ್ದಾರೆ.
A traffic constable of Banaswadi Traffic PS was assaulted while performing his duty. A criminal case has been registered in Banaswadi PS. The main accused has been arrested. Further investigation is continued.
— MN Anucheth, IPS (@Jointcptraffic) July 20, 2023
ಘಟನೆ ವಿವರ
ಜು.11 ರ ಸಂಜೆ 6 ಗಂಟೆ ಸುಮಾರಿಗೆ ಪಾರ್ಕಿಂಗ್ ವಿಚಾರವಾಗಿ ಪರಿಶೀಲನೆ ನಡೆಸುತಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಉಮೇಶ್. ಈ ವೇಳೆ ಕಾರ್ ನೋ ಪಾರ್ಕಿಂಗ್ನಲ್ಲಿ ನಿಲ್ಲಿಸಿರುವುದು ಪತ್ತೆಯಾಗಿದೆ. ಹೀಗಾಗಿ ಗಾಡಿಯ ಟೈರ್ಗೆ ಕ್ಲಾಂಪಿಂಗ್ ಹಾಕಿದ್ದಾರೆ. ಈ ವೇಳೆ ಇದನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಹಲ್ಲೆ ಮಾಡಿದ ಪ್ರಮುಖ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ನಿಜಕ್ಕೂ ಹಲ್ಲೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:Dakshina Kannada: ಜಾಗದ ವಿಚಾರವಾಗಿ ಯೋಧನ ಪತ್ನಿ ಮೇಲೆ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು
ಹಲ್ಲೆ ವೇಳೆ ಮಹಿಳೆಯೊರ್ವರನ್ನ ಆಸ್ಪತ್ರೆಗೆ ಕರೆತಂದಿದ್ದ ಆರೋಪಿ
ಇನ್ನು ಹಲ್ಲೆ ಮಾಡಿದ ಆರೋಪಿಯು ಮಹಿಳೆಯೊರ್ವರನ್ನ ಆಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಈ ಗಲಾಟೆಯಾಗಿದೆ. ಈ ಕುರಿತು ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ ಆರೋಪಿಯಿಂದ ನಿಖರ ಮಾಹಿತಿ ಪಡೆಯುತ್ತಿದ್ದಾರೆ. ವಿಚಾರಣೆ ಬಳಿಕ ಹಲ್ಲೆಯ ಸತ್ಯ ಅಸತ್ಯತೆಗಳು ಹೊರಬಿಳಲಿದೆ. ಇನ್ನು ಪೊಲೀಸ್ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ