Tomato: ಕರ್ನಾಟಕದಲ್ಲಿ ಟೊಮ್ಯಾಟೊ ಬೆಲೆ ಏರಿಕೆ ಕಾರಣವೇನು ? ಇಲ್ಲಿದೆ ಮಾಹಿತಿ
ಕರ್ನಾಟಕದಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ಶತಕ ಬಾರಿಸಿದೆ. ಸದ್ಯ ಟೊಮ್ಯಾಟೊ ಬೆಲೆ ಪ್ರತಿ ಕೇಜಿಗೆ 110 ರಿಂದ 150 ರೂ. ಇದ್ದು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಟೊಮ್ಯಾಟೊ ಬೆಲೆ ಏರಿಕೆಗೆ ಕಾರಣವೇನು ಎಂಬುವುದಕ್ಕೆ ಇಲ್ಲಿದೆ ಉತ್ತರ.
ಬೆಂಗಳೂರು: ಕರ್ನಾಟಕದಲ್ಲಿ (Karnataka) ಟೊಮ್ಯಾಟೊ (Tomato) ಬೆಲೆ ಏರಿಕೆಯಾಗಿದ್ದು, ಶತಕ ಬಾರಿಸಿದೆ. ಸದ್ಯ ಟೊಮ್ಯಾಟೊ ಬೆಲೆ ಪ್ರತಿ ಕೇಜಿಗೆ 110 ರಿಂದ 150 ರೂ. ಇದ್ದು ಕೊಂಡುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಟೊಮ್ಯಾಟೊ ಬೆಲೆ ಇಂದು ಕಡಿಮೆಯಾಗುತ್ತೆ, ನಾಳೆ ಕಡಿಮೆಯಾಗುತ್ತೆ ಗ್ರಾಹಕರು (Costumer) ಅಂತ ದಿನ ಎಣಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಬೆಲೆ ಕಡಿಮೆ ಆಗುವುದಿಲ್ಲ ಎಂದು ಟೊಮ್ಯಾಟೊ ಬೆಳೆಗಾರರು ಹೇಳುತ್ತಿದ್ದಾರೆ.
ಈ ಟೊಮ್ಯಾಟೋ ಬೆಲೆ ಏರಿಕೆಗೆ ಮಳೆ, ಎಲೆ ರೋಗವು ಕಾರಣವಲ್ಲ. ಉತ್ತರ ಭಾರತದಲ್ಲಿ ಅಧಿಕ ಮಳೆಯಾಗುತ್ತಿದ್ದರಿಂದ ಟೊಮ್ಯಾಟೊ ಸಿಗುತ್ತಿಲ್ಲ. ಹೀಗಾಗಿ ಅಲ್ಲಿನ ವರ್ತಕರು ನಮ್ಮ ರಾಜ್ಯಕ್ಕೆ ಆಗಮಿಸಿ ಪ್ರತಿ ಕೇಜಿಗೆ 150 ರಿಂದ 160 ರೂ. ನಷ್ಟು ಹಣ ಕೊಟ್ಟು ಗುಣಮಟ್ಟದ ದುಪ್ಪಟ್ಟು ಟೊಮ್ಯಾಟೊ ಖರೀದಿಸುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೆ ಪೂರೈಕೆ ಕಡಿಮೆಯಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ ಎಂದು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (KFCCI) ಮೂಲಗಳು ತಿಳಿಸಿವೆ.
ಇದನ್ನೂ ಓದಿ: Tomato: ಕೋಲಾರದಲ್ಲಿ ಹೆಚ್ಚಿನ ಬೆಲೆ ತೆತ್ತು ಟೊಮೆಟೋ ಸಾಗಿಸುತ್ತಿರುವ ಉತ್ತರಭಾರತೀಯ ವರ್ತಕರು; ಬೆಂಗಳೂರಿಗೆ ಕಡಿಮೆ ಪೂರೈಕೆ
ನಮ್ಮ ರಾಜ್ಯದಲ್ಲಿ ಗುಣಮಟ್ಟದ ಟೊಮ್ಯಾಟೊ ಸಿಗುವ ಹಿನ್ನೆಲೆ ಉತ್ತರ ಭಾರತದ ವರ್ತಕರು ರೈತರಿಂದಲೆ ನೇರವಾಗಿ ಗುಣಮಟ್ಟದ ಟೊಮ್ಯಾಟೊ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಗುಣಮಟ್ಟದ ಟೊಮ್ಯಾಟೊ ಸಿಗುವುದು ಕಠಿಣವಾಗಿದೆ.
ಮತ್ತೊಂದೆಡೆ ಹೊರರಾಜ್ಯಗಳಲ್ಲಿ ಟೊಮ್ಯಾಟೊಗೆ ಸಬ್ಸಿಡಿ ನೀಡುತ್ತಿದ್ದು, ನಮ್ಮ ರಾಜ್ಯದಲ್ಲಿಯೂ ಸಬ್ಸಿಡಿ ನೀಡಿದರೇ ಟೊಮ್ಯಾಟೊ ಬೆಲೆ ಕಡಿಮೆಯಾಗಬಹುದು. ಇನ್ನು ಟೊಮ್ಯಾಟೊ ಬೆಲೆ ರಾಜಾಧಾನಿಯಲ್ಲಿ ಪ್ರತಿ ಕೇಜಿಗೆ 100 ರಿಂದ 120 ರೂ. ಇದ್ದು, ಇನ್ನು 25 ದಿನಗಳ ಕಾಲ ಇದೇ ಬೆಲೆ ಮುಂದುವರಿಯಲಿದೆ ಎಂದು ಕೆಎಫ್ಸಿಸಿಐ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ