Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato: ಟೊಮೆಟೋ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಖರೀದಿಸಿ ಬೇರೆ ರಾಜ್ಯಗಳಿಗೆ ವಿತರಣೆ

Price Control: ಮಿತಿಮೀರಿರುವ ಟೊಮೆಟೋ ಬೆಲೆ ನಿಯಂತ್ರಿಸಲು ಕೇಂದ್ರದ ಕೃಷಿ ಸಹಕಾರ ಸಂಸ್ಥೆಗಳ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಹೆಚ್ಚುವರಿ ಟೊಮೆಟೋ ಖರೀದಿಸಿ ಇತರ ಕೆಲ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮಾರಲಾಗುತ್ತಿದೆ.

Tomato: ಟೊಮೆಟೋ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಕರ್ನಾಟಕ, ಮಹಾರಾಷ್ಟ್ರ, ಆಂಧ್ರದಿಂದ ಖರೀದಿಸಿ ಬೇರೆ ರಾಜ್ಯಗಳಿಗೆ ವಿತರಣೆ
ಟೊಮೆಟೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 20, 2023 | 1:09 PM

ನವದೆಹಲಿ, ಜುಲೈ 20: ಟೊಮೆಟೋ ಬೆಲೆ (Tomato Price) ಬಹಳ ಕಡೆ ಇನ್ನೂ ಕಡಿಮೆ ಆಗಿಲ್ಲ. ದೆಹಲಿ ಎನ್​ಸಿಆರ್ ಇತ್ಯಾದಿ ಪ್ರದೇಶಗಳಲ್ಲಿ ಸರ್ಕಾರವೇ ಟೊಮೆಟೋವನ್ನು ರಿಯಾಯಿತಿ ಬೆಲೆಗೆ ಮಾರುತ್ತಿದೆ. ಇದಕ್ಕಾಗಿ ಟೊಮೆಟೋ ಹೆಚ್ಚು ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಮಂಡಿಗಳಿಂದ ಟೊಮೆಟೊಗಳನ್ನು ಖರೀದಿಸಿ, ದುಬಾರಿ ಬೆಲೆ ಇರುವ ಪ್ರದೇಶಗಳಲ್ಲಿ ಮಾರಲಾಗುತ್ತಿದೆ. ಅದಕ್ಕಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ.

ಹಲವು ಕಡೆ ಟೊಮೆಟೋ ಬೆಲೆ ಈಗಲೂ 200 ರೂ ಮೇಲೆಯೇ ಇದೆ. ಟೊಮೆಟೋ ಬೆಲೆ ದುಬಾರಿ ಇರುವ ಪ್ರದೇಶಗಳಲ್ಲಿ ಅಲ್ಲಿನ ಮಾರುಕಟ್ಟೆ ಬೆಲೆಗಿಂತ ಶೇ. 30ರಷ್ಟು ಕಡಿಮೆ ದರದಲ್ಲಿ ಟೊಮೆಟೋವನ್ನು ಸಹಕಾರಿ ಸಂಘಗಳ ಮಳಿಗೆಗಳು ಹಾಗೂ ವಾಹನಗಳ ಮೂಲಕ ಮಾರಾಟವಾಗುತ್ತಿದೆ.

ಇದನ್ನೂ ಓದಿTomato: ಕೋಲಾರದಲ್ಲಿ ಹೆಚ್ಚಿನ ಬೆಲೆ ತೆತ್ತು ಟೊಮೆಟೋ ಸಾಗಿಸುತ್ತಿರುವ ಉತ್ತರಭಾರತೀಯ ವರ್ತಕರು; ಬೆಂಗಳೂರಿಗೆ ಕಡಿಮೆ ಪೂರೈಕೆ

ಭಾರತದ ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಟೊಮೆಟೋ ಬೆಳೆಯಲಾಗುತ್ತದೆ. ಆದರೆ, ಅಧಿಕ ಪ್ರಮಾಣದಲ್ಲಿ ಟೊಮೆಟೋ ಬೆಳೆಯುವುದು ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ. ಅದರಲ್ಲೂ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಟೊಮೆಟೋ ಬೆಳೆಯಲಾಗುತ್ತದೆ. ಇಲ್ಲಿಯ ಹೆಚ್ಚುವರಿ ಟೊಮೆಟೋಗಳು ಬೇರೆ ಬೇರೆ ರಾಜ್ಯಗಳಿಗೆ ವಿತರಣೆ ಆಗುತ್ತವೆ. ಇದರಿಂದ ಟೊಮೆಟೋ ಬೆಳೆಗಾರರಿಗೆ ಬೆಲೆಕುಸಿತದ ಸಂಭವ ಕಡಿಮೆ ಆಗುತ್ತದೆ. ಉತ್ತಮ ಬೆಲೆ ಕೂಡ ಸಿಗುವ ಸಾಧ್ಯತೆ ಇರುತ್ತದೆ. ಈ ಸೀಸನ್​ನಲ್ಲಿ ಒಳ್ಳೆಯ ಟೊಮೆಟೋ ಫಸಲು ಪಡೆದ ರೈತರಿಗೆ ಕೈತುಂಬ ಹಣ ಸಿಕ್ಕಿರುವುದು ಹೌದು.

ಟೊಮೆಟೋ ಹಣ್ಣಿನ ಬೆಲೆ ಒಂದು ವರ್ಷದಲ್ಲಿ ದುಬಾರಿ ಎನಿಸುವುದು ಮೂರ್ನಾಲ್ಕು ತಿಂಗಳು ಮಾತ್ರ. ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಟೊಮೆಟೋ ಆವಕ ಕಡಿಮೆ ಆಗುವುದರಿಂದ ಆ ಸಂದರ್ಭದಲ್ಲಿ ಟೊಮೆಟೋ ಬೆಲೆ ಹೆಚ್ಚು ಇರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಅದರ ಬೆಲೆ ಸಾಕಷ್ಟು ತಗ್ಗುವ ನಿರೀಕ್ಷೆ ಇದೆ.

ಇದನ್ನೂ ಓದಿChikkaballapur News: ಖಾಸಗಿ ಕಂಪನಿಗೆ ಗುಡ್ ಬೈ ಹೇಳಿ ಟೆಮೆಟೊ ಬೆಳೆದ ಬಿ.ಕಾಂ ಪದವೀಧರ, ಒಂದೇ ತಿಂಗಳಲ್ಲಿ ಲಕ್ಷಾಧೀಶನಾದ

ಟೊಮೆಟೋ ಹಣ್ಣನ್ನು ಹೆಚ್ಚು ದಿನ ಶೇಖರಿಸಿಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಗ್ರಹದ ಮೂಲಕ ಬೆಲೆ ನಿಯಂತ್ರಣ ಕಷ್ಟಸಾಧ್ಯ. ಟೊಮೆಟೋ ಬೆಳೆಯುವ ರೈತರಿಗೂ ಒಂದು ರೀತಿಯಲ್ಲಿ ಅನಿಶ್ಚಿತತೆ ಕಾಡುತ್ತದೆ. ಈಗ ಟೊಮೆಟೋಗೆ ಒಳ್ಳೆಯ ಬೆಲೆ ಸಿಕ್ಕಿದೆ ಎಂದು ಮುಂದಿನ ತಿಂಗಳೂ ಉತ್ತಮ ಬೆಲೆ ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅತಿಯಾಗಿ ಟೊಮೆಟೋ ಆವಕವಾಗಿ ಚೀಲಕ್ಕೆ ಹತ್ತಿಪ್ಪತ್ತು ರುಪಾಯಿ ಬೆಲೆಗೆ ಕುಸಿದುಹೋಗುವುದುಂಟು. ಅಂಥ ಸಂದರ್ಭದಲ್ಲಿ ಟೊಮೆಟೋ ಬೆಳೆಗಾರರು ಲಕ್ಷಾಂತರ ರೂ ನಷ್ಟ ಮಾಡಿಕೊಂಡು ಪರದಾಡುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ