AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Pak: ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡ ಕನ್ನಡಿಗರ ಹೆಮ್ಮೆಯ ಮೈಸೂರ್ ಪಾಕ್​

ಪ್ರಪಂಚದಲ್ಲಿ ಹೆಸರು ಮಾಡಿರುವ ಕನ್ನಡಿಗರ ಹೆಮ್ಮೆಯ ಮೈಸೂರ್ ಪಾಕ್, ಇದೀಗ​ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ.

Mysore Pak: ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡ ಕನ್ನಡಿಗರ ಹೆಮ್ಮೆಯ ಮೈಸೂರ್ ಪಾಕ್​
ಮೈಸೂರ್ ಪಾಕ್
ರಾಮ್​, ಮೈಸೂರು
| Edited By: |

Updated on: Jul 21, 2023 | 9:20 AM

Share

ಮೈಸೂರು, (ಜುಲೈ 21): ಒಂದೊಂದು ಊರಿಗೆ ಹೋದಾಗಲೂ ಒಂದೊಂದು ಆಹಾರದ ವಿಶೇಷತೆಗಳು ಇರುತ್ತವೆ. ಅವು ಕೆಲ ಪ್ರದೇಶಗಳಿಗೆ ಮಾತ್ರ ಫೇಮಸ್​ ಆಗಿವೆ. ಆದ್ರೆ, ತನ್ನ ಹೆಸರಿನಲ್ಲಿಯೇ ಮೈಸೂರನ್ನು ಪ್ರತಿನಿಧಿಸುವ ಮೈಸೂರ್ ಪಾಕ್ (Mysore pak) ದೇಶ ವಿದೇಶಗಳ ತನಕ ಹೆಸರು ವಾಸಿಯಾಗಿದೆ. ಇದೀಗ ಈ ಮೈಸೂರುಪಾಕ್​ ವಿಶ್ವದ ಸ್ಟ್ರೀಟ್​ ಫುಡ್​ನಲ್ಲಿ (Street Food) 14ನೇ ಸ್ಥಾನ ಪಡೆದುಕೊಂಡಿದೆ. ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರುಪಾಕ್, ಮೈಸೂರು ಅಂದ್ರೆ ಮೈಸೂರುಪಾಕ್ ಎನ್ನುವಷ್ಟು ಖ್ಯಾತಿ ಗಳಿಸಿದ್ದು, ಇದೀಗ ಜಾಗತಿಕ ಮಟ್ಟದ ಮನ್ನಣೆ ಪಡೆದುಕೊಂಡಿದೆ. 4.4 ರೇಟಿಂಗ್ ಪಡೆದ ಮೈಸೂರುಪಾಕ್, ಆನ್‌ಲೈನ್‌ ಮಾರ್ಕೆಟ್​ನಲ್ಲಿ ವಿಶ್ವದ 50 ತಿಂಡಿ ತಿನಿಸುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಕುಲ್ಫಿಗೆ 18ನೇ ಸ್ಥಾನ, ಕುಲ್ಫಿ ಫಲೂದಾಗೆ 32ನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ನೀವು ಮನೆಯಲ್ಲಿಯೇ ಮೈಸೂರ್ ಪಾಕ್ ತಯಾರಿಸಲು ಇಲ್ಲಿದೆ ಸುಲಭ ವಿಧಾನ

ಟೇಸ್ಟ್ ಅಟ್ಲಾಸ್, ವಿಶ್ವದ ಬೆಸ್ಟ್ ಸ್ಟ್ರೀಟ್ ಫುಡ್ ಸ್ವೀಟ್​ನ ಟಾಪ್ 50​ ಪಟ್ಟಿ ಬಿಡುಗಡೆ ಮಾಡಿದ್ದು,  ಇದರಲ್ಲಿ ಮೈಸೂರುಪಾಕ್​ಗೆ 4.4 ರೇಟಿಂಗ್​ನಿಂದಿಗೆ 14ನೇ ಸ್ಥಾನ​ ಸಿಕ್ಕಿದೆ. ಇನ್ನು ಕುಲ್ಫಿಗೆ 4.3 ರೇಟಿಂಗ್​ ನೋಂದಿಗೆ 18ನೇ ಸ್ಥಾನ ನೀಡಲಾಗಿದೆ. ಫಲೂದಾ 4.0 ರೇಟಿಂಗ್​ನೊಂದಿಗೆ 32ನೇ ಸ್ಥಾನ ಪಡೆದುಕೊಂಡಿದೆ.

ಇಂತಹ ಮೈಸೂರ್ ಪಾಕ್ ನಮ್ಮ ಮೈಸೂರಿನಲ್ಲಿಯೇ ತಯಾರಾಗಿದ್ದು ಎನ್ನುವುದೇ ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವ ವಿಚಾರ. ಅಷ್ಟೇ ಅಲ್ಲದೆ ದೇಶ ವಿದೇಶಗಳಿಗೆ ಮೈಸೂರಿನ ಹೆಸರನ್ನು ಪರಿಚಯಿಸಿದ ಸಿಹಿ ತಿನಿಸು ಕೂಡ ಹೌದು. ಇಂತಹ ತಿನಿಸು ಮೈಸೂರು ಅರಮನೆಯ ಪಾಕಶಾಲೆಯಲ್ಲಿಯೇ ತಯಾರಾಗಿದ್ದು ಎನ್ನುವುದೇ ಸಂತಸದ ವಿಚಾರ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ