AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dakshina Kannada: ಜಾಗದ ವಿಚಾರವಾಗಿ ಯೋಧನ ಪತ್ನಿ ಮೇಲೆ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು

ಜಿಲ್ಲೆಯ ಕಡಬ ತಾಲೂಕಿನ ಕಲ್ಲುಗುಡ್ಡೆ ಗ್ರಾಮದಲ್ಲಿ ಸೈನಿಕನ ಪತ್ನಿಯ ಮೇಲೆ ಜಾಗದ ವಿಚಾರವಾಗಿ ಪಕ್ಕದ ಮನೆಯ ನಾಲ್ವರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

Dakshina Kannada: ಜಾಗದ ವಿಚಾರವಾಗಿ ಯೋಧನ ಪತ್ನಿ ಮೇಲೆ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು
ಹಲ್ಲೆಗೊಳಗಾದ ಸೈನಿಕನ ಪತ್ನಿ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jul 11, 2023 | 12:11 PM

Share

ದಕ್ಷಿಣ ಕನ್ನಡ: ಜಿಲ್ಲೆಯ ಕಡಬ(Kadaba) ತಾಲೂಕಿನ ಕಲ್ಲುಗುಡ್ಡೆ ಗ್ರಾಮದಲ್ಲಿ ಸೈನಿಕ ಅಜೀಜ್​​ ಪತ್ನಿ ಫೌಝಿಯಾ ಎಂಬುವವರ ಮೇಲೆ ಜಾಗದ ವಿಚಾರವಾಗಿ ಪಕ್ಕದ ಮನೆಯ ನಾಲ್ವರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಫೌಝಿಯಾ ಕಲ್ಲುಗುಡ್ಡೆಯಲ್ಲಿರುವ ತಂದೆಯ ಮನೆಗೆ ಹೋಗಿದ್ದರು. ಈ ವೇಳೆ ಜಾಗದ ವಿಚಾರವಾಗಿ ಫೌಝಿಯಾ ಅವರ ತಂದೆಯ ಮೇಲೆ ನಾಲ್ವರು ಯುವಕರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಜೊತೆಯಲ್ಲಿದ್ದ ಫೌಝಿಯಾ ಮೇಲೂ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗಾಯಗೊಂಡ ತಂದೆ ಮಗಳು​​​ ಇದೀಗ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಸುಲಿಗೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ನಗರದ ಅರಮನೆ ಮೈದಾನದ ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದ ಆರೋಪಿ ಯಾಸಿರ್(26) ಕಾಲಿಗೆ ಗುಂಡೇಟು ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸುಲ್ತಾನಪಾಳ್ಯದ ಭುವನೇಶ್ವರನಗರದ ನಿವಾಸಿಯಾಗಿರುವ ಆರೋಪಿ ಯಾಸಿರ್, 7ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಇನ್ನು ಇತ ಅಪ್ರಾಪ್ತನಾಗಿದ್ದಾಗಿಂದಲೇ ಸುಲಿಗೆಗೆ ಇಳಿದಿದ್ದನಂತೆ. ಇಂದು ಬೆಳಗ್ಗೆ ಆರೋಪಿ ಹಿಡಿಯಲು ಹೋದಾಗ ಪೊಲೀಸರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಶೇಷಾದ್ರಿಪುರಂ ಪೊಲೀಸರು ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಇದನ್ನೂ ಓದಿ:Koppala News: ಆಸ್ತಿಗೋಸ್ಕರ ಹೆತ್ತವಳ ಮೇಲೆಯೇ ಹಲ್ಲೆ; ನ್ಯಾಯಕ್ಕಾಗಿ ಕಣ್ಣೀರಿಡುತ್ತಿರುವ ತಾಯಿ

ಯುವಕನನ್ನ ಅಪಹರಿಸಿ ಬರ್ಬರ ಕೊಲೆ

ಬೆಂಗಳೂರು: ಯುವಕನನ್ನ ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಚಂದ್ರಾಲೇಔಟ್​​ ನಿವಾಸಿ ಮಹಮ್ಮದ್​​​​ ತಾಹಿರ್ ಕೊಲೆಯಾದ ವ್ಯಕ್ತಿ. ನಿನ್ನೆ(ಜು.10) ರಾತ್ರಿ 11 ಗಂಟೆಗೆ ಫೋನ್ ಕರೆ ಬಂದಿದ್ದರಿಂದ ಮನೆಯಿಂದ ಹೊರ ಹೋಗಿದ್ದ ತಾಹಿರ್​ನನ್ನ, ಆಟೋದಲ್ಲಿ ಕಿಡ್ನ್ಯಾಪ್ ಮಾ​​ಡಿದ್ದರು. ಇದೀಗ ಕೆಂಗೇರಿ ಬಳಿ ತಾಹಿರ್​​​ ಶವ ಪತ್ತೆಯಾಗಿದೆ. ತಾಹಿರ್​ನನ್ನ ದುಷ್ಕರ್ಮಿಗಳು ಕೊಲೆ ಮಾಡಿ, ಬಿಸಾಕಿ ಹೋಗಿದ್ದಾರೆ.​ ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ