ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪಕ್ರರಣ: ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಪತ್ರ ಬರೆದ ಹುಬ್ಬಳ್ಳಿ ಜನ
ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪಕ್ರರಣ ಕುರಿತು ಹುಬ್ಬಳ್ಳಿ ಜನ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದಾರೆ.
ಹುಬ್ಬಳ್ಳಿ: ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪಕ್ರರಣ ಕುರಿತು ಹುಬ್ಬಳ್ಳಿ (Hubli) ಜನ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಪತ್ರ ಬರೆದಿದ್ದಾರೆ. ಯುವಕ ಸಂದೀಪ್ ಮೇಲೆ ನಡೆಸಿರುವ ಹಲ್ಲೆ ಮತ್ತು ಹುಬ್ಬಳ್ಳಿ-ಧಾರವಾಡ (Hubli-Dharwad) ಅವಳಿ ನಗರದಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳ ಕುರಿತು ಎಸ್.ಆರ್ ಪಾಟೀಲ್ ಎಂಬುವರು ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 13 ಜನರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಯುವಕ ಸಂದೀಪ ಪ್ರಕರಣವನ್ನು ರಾಷ್ಟ್ರ ಮಟ್ಟದಲ್ಲಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ
ಯುವಕ ಸಂದೀಪ್ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಹುಬ್ಬಳ್ಳಿಗೆ ನಾನೇ ಡಾನ್ ಎಂದು ಎದುರಾಳಿ ಗ್ಯಾಂಗ್ಗೆ ಸಂದೇಶ ರವಾನೆ ಮಾಡಿದ್ದನು. ಇದರಿಂದ ಸಿಟ್ಟೆಗೆದ್ದ ಪ್ರಜ್ವಲ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂದೀಪ್ನನ್ನು ಗಬ್ಬೂರನಿಂದ ಅಪಹರಿಸಿ ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಈ ಪ್ರಕರಣ ನಡೆದು ಮೂರು ತಿಂಗಳು ನಂತರ ಜುಲೈ 11 ರಂದು ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ನನ್ನಾಕಿ ಹೃದಯದಲ್ಲಿರಲಿ, ಗಾಡಿ ನಂಬರ್ ಪ್ಲೇಟ್ ಮೇಲಲ್ಲ! ವೈರಲ್ ಆಗ್ತಿದೆ ಹುಬ್ಬಳ್ಳಿ ಧಾರವಾಡ ಪೊಲೀಸರ ಜಾಗೃತಿ ಸಂದೇಶ
ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಸಂತೋಷ್ ಬಾಬು ಮಾತನಾಡಿ ಎರಡು ವಿಡಿಯೋ ಮೂಲಕ ವಿಷಯ ನಮ್ಮ ಗಮನಕ್ಕೆ ಬಂದಿದೆ. ಆರೋಪಿ ಪ್ರಜ್ವಲ್ ತಾಯಿಗೆ ರೀಲ್ಸ್ ಮೂಲಕ ಸಂದೀಪ್ ಬೈದಿದ್ದನು. ಇನ್ಸ್ಟಾಗ್ರಾಂ ರೀಲ್ಸ್ನಲ್ಲಿ ಅತ್ಯಂತ ಕೆಟ್ಟದಾಗಿ ಬೈತಿದ್ದನು. ಮೂರ್ನಾಲ್ಕು ತಿಂಗಳ ಹಿಂದಿನ ಘಟನೆ ಇದಾಗಿದ್ದು, ಈವರೆಗೆ ಸಂದೀಪ್ ದೂರು ಕೊಟ್ಟಿಲ್ಲ. ಅಲ್ಲದೆ, ಹುಬ್ಬಳ್ಳಿಯ ಸೆಟ್ಲಮೆಂಟ್ನಲ್ಲಿ ನಡೆದ ಘಟನೆ ಎಂಬ ಅನುಮಾನ ಇದೆ ಎಂದಿದ್ದರು. ಹಲ್ಲೆ ಪ್ರಕರಣ ಸಂಬಂಧ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ